ಗೀಚಿಟ್ಟೆ

Author : ಆಶಿಕ್ ಮುಲ್ಕಿ

Pages 72

₹ 75.00




Year of Publication: 2019
Published by: ಭಾವನ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಗೀಚಿಟ್ಟೆ ಓದುವ ಸಂಕಟಕ್ಕೆ...ಸಂತಸಕ್ಕೆ ಇದು ಯುವ ಕವಿ ಆಶಿಕ್ ಮುಲ್ಕಿಯವರ ಮೊದಲ ಕವನ ಸಂಕಲನ. ತೀರಾ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದು ಬದುಕಿನ ಸಂಕಟಗಳ ಬೆಂಕಿಯನ್ನು ತನಗೆ ಪೂರಕವಾಗಿ ಬಳಸಿಕೊಂಡು ಪತ್ರಕರ್ತನಾಗಿ ಬೆಳೆದ ಆಶಿಕ್ ಯೌವನದ ಬೆಳಕಿಗೆ ಸುಟ್ಟುಕೊಳ್ಳಲು ಬಂದ ಚಿಟ್ಟೆಗಳಂತಿವೆ ಈ ಪುಸ್ತಕದಲ್ಲಿರುವ ಕೆಲವು ಕಿರು ಪದ್ಯ. ‘ಗಾಳಿಯ ಮಾತಿಗೆ ಆಗಾಗ ಕಿವಿ ಕೊಡಿ’ ಎನ್ನುವ ಆಶಿಕ್ , ಆ ಗಾಳಿಯ ಮೂಲಕವೇ ರೋಚಕ ಸುಂದರ ಕವಿತೆಗಳನ್ನು ಆಲಿಸಿದ್ದಾರೆ.  ನಿರ್ಗತಿಕನೊಬ್ಬ ಒಂದೊತ್ತಿನ ಹಿಟ್ಟಿಗೆ ಚಡಪಡಿಸಿದಂತೆ..ಕವಿತೆಯ ಸಾಲು ಬರೆಯಲು ಚಡಪಡಿಸಿದ್ದೇನೆ ಎನ್ನುವ ಆಶಿಕ್ ಕನ್ನಡ ಕಾವ್ಯಲೋಕಕ್ಕೆ ಬರವಸೆಯ ಕವಿಯಾಗಲಿದ್ದಾರೆ ಎನ್ನಬಹುದು. 

About the Author

ಆಶಿಕ್ ಮುಲ್ಕಿ
(01 February 1995)

ಆಶಿಕ್ ಮಂಗಳೂರಿನ ಮುಲ್ಕಿಯ ಹುಡುಗ. ಮಾತೃ ಭಾಷೆ ಮಲಾಯಳಂ. ಆದರೆ ಬೆಳೆದಿದ್ದೆಲ್ಲಾ ಕಡಲ ನಗರ ಮಂಗಳೂರಿನಲ್ಲಿ. ಹೀಗಾಗಿ ಕನ್ನಡ ಅವನ ಭಾಷೆ. ಕೆನಡಾ ಖ್ಯಾತ ಬರಹಗಾರ್ತಿ ಹನ್ನಾ ರಿಷೆಲ್ ಹೇಳಿದ ಹಾಗೆ ತುಂಬಾ ಓದಬೇಕು, ತುಂಬಾ ಬರೆಯಬೇಕು, ಕೊನೆಗೆ ಎಲ್ಲವನ್ನೂ ಮರೆಯಬೇಕು. ಅಂತೆಯೇ ಸಾಧ್ಯವಾದಷ್ಟು ಓದುತ್ತೇನೆ, ಸಾಧ್ಯವಾದಷ್ಟು ಬರೆಯುತ್ತೇನೆ, ಕೊನೆಗೆ ಎಲ್ಲವನ್ನೂ ಮರೆತು ಬಿಡುತ್ತೇನೆ. ಮತ್ತೆ ಹೊಸ ಓದಿಗೆ ತೆರದುಕೊಳ್ಳುತ್ತೇನೆ, ಹೊಸದಾಗಿ ಏನಾದರು ಗೀಚುತ್ತೇನೆ ಎನ್ನುವ ಹುಡುಗ ಆಶಿಕ್.  ಹೀಗೆ ಕನ್ನಡದಲ್ಲಿ ಓದುವುದು ಬರೆಯುವುದು ಅವನ ಹವ್ಯಾಸ. ಹುಟ್ಟಿದ್ದು 1995, ಫ್ರೆಬ್ರವರಿ 1ರಂದು. ಸುರತ್ಕಲ್‍ನ ಗೋಂವಿದಾಸ ಕಾಲೇಜಿನಲ್ಲಿ ...

READ MORE

Related Books