ವಿಜ್ಞಾನ ಮತ್ತು ಪರಿಸರ ಸಾಹಿತ್ಯ ಕೃತಿಗಳ ಪ್ರಕಟಣೆಗೆಂದೇ ಆರಂಭಗೊಂಡಿರುವ ಪ್ರಕಾಶನ ಸಂಸ್ಥೆ ಭೂಮಿ ಬುಕ್ಸ್. ಹಿರಿಯ ಪತ್ರಕರ್ತರಾದ ನಾಗೇಶ ಹೆಗಡೆ, ಅವರ ಸಹೋದರಿ ವಿಶಾಲಾಕ್ಷಿ ಮತ್ತು ವಿಶಾಲಾಕ್ಷಿಯವರ ಪುತ್ರಿ ದಿವ್ಯಾ ಅವರ ಶ್ರದ್ಧೆ ಈ ಪ್ರಕಾಶನದ ಹಿಂದಿನ ಶಕ್ತಿಯಾಗಿದೆ. 2010ರ ಜನವರಿಯಲ್ಲಿ ಭೂಮಿ ಬುಕ್ಸ್ ಆರಂಭಗೊಂಡಿತು.
ವಿಸ್ಮಯ ಜಗತ್ತಿನ ವಿಭಿನ್ನ ನೋಟಗಳನ್ನು ಕಟ್ಟಿಕೊಡುವ ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸುತ್ತ ಬಂದಿರುವ ಭೂಮಿ ಬುಕ್ಸ್, ಪುಸ್ತಕ ಪ್ರಿಯರ ಎದುರು ಒಂದು ಹೊಸ ಸಾಧ್ಯತೆಯನ್ನೇ ತೆರೆದಿದೆ. ಅಪೂರ್ವ ಪಶ್ಚಿಮ ಘಟ್ಟ, ಆಹಾ ಇಸ್ರೇಲಿ ಕೃಷಿ, ಕೊಪೆನ್ ಹೆಗನ್ ಋತುಸಂಹಾರ, ಮನುಕುಲ ರಕ್ಷಣೆಗೆ ಮಹತ್ವದ ದಿನಗಳು, ಟಿಪ್ಪೂ ಖಡ್ಗದ ನ್ಯಾನೊ ಕಾರ್ಬನ್, ಗ್ರೇಥಾ ಥನ್‌ಬರ್ಗ್, ಡೇಟಾ ದೇವರು ಬಂದಾಯ್ತು, ಅಭಿವೃದ್ಧಿಯ ಅಂಧಯುಗ ಮೊದಲಾದ ಮಹತ್ವದ ಪ್ರಕಟಣೆಗಳು ಭೂಮಿ ಬುಕ್ಸ್ ಹೆಮ್ಮೆ.
©2022 Book Brahma Private Limited.