ಸ್ವತಃ ಲೇಖಕರಾಗಿರುವ ಎ. ಆರ್. ಮಣಿಕಾಂತ್ ಅವರು 2006ರಲ್ಲಿ ನೀಲಿಮಾ ಪ್ರಕಾಶನ ಆರಂಭಿಸಿದರು. ಕಡಿಮೆ ಬೆಲೆಗೆ ಉತ್ತಮ ಪುಸ್ತಕಗಳನ್ನು ಕೊಡಬೇಕು ಎಂಬುದು ಉದ್ದೇಶ.
ನೀಲಿಮಾ ಪ್ರಕಾಶನ ಪ್ರಕಟಿಸಿದ ಅಮ್ಮ ಹೇಳಿದ ಎಂಟು ಸುಳ್ಳುಗಳು 170ನೇ ಮುದ್ರಣ, ಅಪ್ಪ ಅಂದ್ರೆ ಆಕಾಶ 94ನೇ ಮುದ್ರಣ, ಭಾವತೀರಯಾನ 40ನೇ ಮುದ್ರಣ, ಮನಸು ಮಾತಾಡಿತು 25ನೇ ಮುದ್ರಣ, ನವಿಲುಗರಿ 12ನೇ ಮುದ್ರಣ ಕಂಡಿವೆ. ಇದು ನೀಲಿಮಾ ಪ್ರಕಾಶನದ ಹೆಗ್ಗಳಿಕೆ.
‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಕೃತಿಗೆ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಬಸವರಾಜ ಹೊರಟ್ಟಿ ಪ್ರತಿಷ್ಠಾನದ ಅವ್ವ ಪ್ರಶಸ್ತಿ ಲಭಿಸಿದ್ದು, ನೀಲಿಮಾ ಪ್ರಕಾಶನದ ಕ್ರಿಯಾಶೀಲತೆಗೆ ಇನ್ನಷ್ಟು ಬಲ ನೀಡಿದೆ.
©2023 Book Brahma Private Limited.