ಪುಸ್ತಕ ಮುದ್ರಣ ಮತ್ತು ಪ್ರಕಾಶನದ ಅಗತ್ಯ ಪೂರೈಸಲೆಂದೇ ಇರುವ ಸಂಸ್ಥೆ ನಿರುತ ಪಬ್ಲಿಕೇಷನ್ಸ್. ಪ್ರಧಾನವಾಗಿ ಶೈಕ್ಷಣಿಕ ಪುಸ್ತಕಗಳನ್ನು - ಮಾನವ ಸಂಪನ್ಮೂಲ, ಸೋಷಿಯಲ್ ವರ್ಕ್, ಸಾಮಾಜಿಕ ವಿಜ್ಞಾನಗಳು ಮೊದಲಾದ ಕ್ಷೇತ್ರಗಳಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಂಡು - ಪ್ರಕಟಿಸುವುದು ನಿರುತದ ಉದ್ದೇಶ. ಎಂ & ಎಚ್ಆರ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ನ ಸಿಇಒ ಆಗಿರುವ ಎಂ.ಎಚ್. ರಮೇಶ ಇದರ ಸಂಸ್ಥಾಪಕರು.
2010ರಿಂದ ಪ್ರಕಟವಾಗುತ್ತಿರುವ ಸೋಷಿಯಲ್ ವರ್ಕ್ ಫುಟ್ಪ್ರಿಂಟ್ ಜರ್ನಲ್ನ ಸಂಪಾದಕರಾಗಿ, ಕರ್ನಾಟಕ ಎನ್ಜಿಓಸ್ ಡೈರೆಕ್ಟರಿ ಪುಸ್ತಕದ ಲೇಖಕರಾಗಿ ಗಮನ ಸೆಳೆದಿರುವ ರಮೇಶ ಅವರು 2012ರಲ್ಲಿ ನಿರುತ ಪಬ್ಲಿಕೇಷನ್ಸ್ ಆರಂಭಿಸಿದರು. ಇದರ ಮೂಲಕ ಪ್ರಕಾಶನ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ಇವರು ಪ್ರಕಟಿಸಿರುವ ಶೈಕ್ಷಣಿಕ ಮಹತ್ವವುಳ್ಳ ಪುಸ್ತಕಗಳು ಖ್ಯಾತ ಲೇಖಕರು ಮತ್ತು ಶೈಕ್ಷಣಿಕ ತಜ್ಞರು ಬರೆದವುಗಳಾಗಿವೆ.
ನಿರುತ ಪ್ರಕಟಿಸಿರುವ ಶಂಕರ ಪಾಠಕ್ ಅವರ ’ಸೋಷಿಯಲ್ ವರ್ಕ್ ಅಂಡ್ ಸೋಷಿಯಲ್ ವೆಲ್ಫೇರ್” ಕೃತಿಯು ನ್ಯಾಷನಲ್ ಬುಕ್ ಟ್ರಸ್ಟ್ನ ರಿಯಾಯ್ತಿ ಯೋಜನೆಯಡಿ ಪರಿಗಣಿತವಾಗಿದೆ. ಹಲವು ಯುವ ಲೇಖಕರನ್ನು ಗುರುತಿಸಿ, ಅವರ ಪುಸ್ತಕ ಪ್ರಕಟಣೆಗೆ ಮುಂದಾಗಿರುವುದೂ ನಿರುತದ ಮುಖ್ಯ ಹೆಜ್ಜೆ. ಹಲವು ಪ್ರಶಸ್ತಿಗಳಿಗೆ ನಿರುತ ಪಾತ್ರವಾಗಿದೆ.
©2023 Book Brahma Private Limited.