ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಪ್ರಚುರಪಡಿಸುವ ಉದ್ದೇಶದಿಂದ 2001ರಲ್ಲಿ ಆರಂಭವಾದ ಸಂಸ್ಥೆ ಟೋಟಲ್ ಕನ್ನಡ. ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದ ವಿ. ಲಕ್ಷ್ಮಿಕಾಂತ್ ಅವರು ಕನ್ನಡದ ಮೇಲಿನ ಅಭಿಮಾನ ಮತ್ತು ಕಾಳಜಿಯಿಂದ ಕಟ್ಟಿದ ಸಂಸ್ಥೆ ಇದು.
ಕನ್ನಡ ಮತ್ತು ಕರ್ನಾಟಕ ಕುರಿತ ಪುಸ್ತಕಗಳ ಪ್ರಕಟಣೆ, ಕನ್ನಡ ಪುಸ್ತಕ, ಸಿನಿಮಾ, ಸಂಗೀತ ಮತ್ತು ಕನ್ನಡಕ್ಕೆ ಸಂಬಂಧಿಸಿದ ಯಾವುದೇ ವಸ್ತುಗಳ ಮಾರಾಟ, ದೇಶ-ವಿದೇಶದ ಯಾವುದೇ ಭಾಗಕ್ಕೆ ತಲುಪಿಸುವ ಉದ್ದೇಶದ ಆನ್ಲೈನ್ ಸೇವೆಯನ್ನೂ ಇದು ಹೊಂದಿದೆ.
ಪುಸ್ತಕ ವಿಭಾಗದಲ್ಲಿ ಪೂರ್ಣಚಂದ್ರ ತೇಜಸ್ವಿ, ಕುವೆಂಪು, ಕಾರಂತ, ಮುಂತಾದ ಶ್ರೇಷ್ಠ ಕವಿ-ಲೇಖಕರ ಪುಸ್ತಕಗಳು, ಕೈಲಾಸಂ, ಕಾರ್ನಾಡ್ ಮುಂತಾದವರ ಜನಪ್ರಿಯ ನಾಟಕಗಳು, ಮಕ್ಕಳ ಪುಸ್ತಕಗಳು, ಮನೋವಿಕಾಸ ಪುಸ್ತಕಗಳು, ಧಾರ್ಮಿಕ, ಶೈಕ್ಷಣಿಕ, ಪ್ರವಾಸೋದ್ಯಮ, ಅಡುಗೆ ಪುಸ್ತಕಗಳು, ಗಾದೆಗಳು, ಒಗಟುಗಳು, ವಚನಗಳು, ದಾಸಪದಗಳು, ಶ್ಲೋಕಗಳು ಮುಂತಾದ ಅನೇಕ ಪುಸ್ತಕಗಳು ಲಭ್ಯ.
©2022 Book Brahma Private Limited.