About the Author

ಎ.ವಿ. ನಾವಡ ಅವರು 1946 ಏಪ್ರಿಲ್ 28ರಲ್ಲಿ ಮಂಗಳೂರು ಸಮೀಪದ ಕೋಟೆಕಾರು ಎಂಬಲ್ಲಿ ಜನಿಸಿದರು. ತಂದೆ ಕವಿ ಅಮ್ಮೆಂಬಳ ಶಂಕರನಾರಾಯಣ ನಾವಡ, ತಾಯಿ ಪಾರ್ವತಿ. ಮಂಗಳೂರಿನ ಸಂತ ಎಲೋಷಿಯಸ್ ಕಾಲೇಜಿನಲ್ಲಿ ಪದವಿಯನ್ನೂ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಪದವಿಯನ್ನೂ ಪಡೆದರು.

ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜಿನಲ್ಲಿ 1970ರಿಂದ-94ರವರೆಗೆ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ 24 ವರ್ಷ ಸೇವೆ ಸಲ್ಲಿಸಿದರು.

1994ರಿಂದ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಧ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ, ಪುರಂದರದಾಸ ಅಧ್ಯಯನ ಪೀಠದ ಅಧ್ಯಕ್ಷರಾಗಿ, ಉಡುಪಿಯ ಎಂ.ಜಿ.ಎಂ. ಕಾಲೇಜಿನ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರದಲ್ಲಿ ಸಂಶೋಧಕರಾಗಿ, ಉಡುಪಿಯ ಗೋವಿಂದಪೈ ಸಂಶೋಧನ ಕೇಂದ್ರದ ತುಳು ನಿಘಂಟು ಯೋಜನೆಯ ಮುಖ್ಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಜಹಂಸ, ಮಧುಚಂದ್ರ, ಪೇಟೆಗೆ ಬಂದ ಪುಟ್ಟಿ ,ಅಕ್ಕೆರಸು ಸಿರಿ ಮುಂತಾದ ಮಕ್ಕಳ ಕೃತಿಗಳನ್ನು ರಚಿಸಿದ್ಧಾರೆ. ಒಂದು ಸೊಲ್ಲು ನೂರು ಸೊರ, ಜಾನಪದ-ವೈದ್ಯರ ಹಾಡುಗಳು, ತುಳು ಜಾನಪದ ಗೀತೆಗಳು, ಸಂಪಾದಿತ-ವಾಙ್ಞಯ ತಪಸ್ವಿ, ನೇತ್ರಾವತಿ, ತುರಾಯಿ, ಬೆಳ್ಳಿ, ಮಿನುಗು, ಹರಿದಾಸರ ಕೀರ್ತನೆಗಳಲ್ಲಿ- ಸಾವಿರ ಕೀರ್ತನೆಗಳು, ಮುಂತಾದವುಗಳು ಇವರ ಸಂಶೋಧನಾ ಕೃತಿಗಳು. 

ಪರಶುರಾಮ ಪ್ರಶಸ್ತಿ, ಸಾಹಿತ್ಯ ದಂಪತಿ ಪುರಸ್ಕಾರ, ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ವರ್ಧಮಾನ ಸಾಹಿತ್ಯ ಪ್ರಶಸ್ತಿ,ಗುಲಬರ್ಗಾ ವಿಶ್ವವಿದ್ಯಾಲಯದ ಪುಸ್ತಕ ಬಹುಮಾನ, ಕನಕಶ್ರೀ ಪ್ರಶಸ್ತಿ, ಆರ್ಯಭಟ ಸಾಹಿತ್ಯ ಪ್ರಶಸ್ತಿ, ಪರಶುರಾಮ ಪ್ರಶಸ್ತಿ, ಸಂದೇಶ ಪ್ರಶಸ್ತಿ. ಇನ್ನೂ ಹಲವಾರು ಗೌರವ ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿವೆ.

ಎ.ವಿ. ನಾವಡ

(28 Apr 1946)