About the Author

ಚಿಕ್ಕಮಗಳೂರು ಜಿಲ್ಲೆಯ ತೆರೀಕೆರೆಯಲ್ಲಿ ಜನಿಸಿದ ಅಜ್ಜಂಪುರ ಕೃಷ್ಣಸ್ವಾಮಿ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರದ ಪದವೀಧರರು. ಡೆಹರಾಡೂನ್ ನಲ್ಲಿ ಅರಣ್ಯ ತರಬೇತಿ ಪಡೆದರು. ಅಂದಿನ ಮೈಸೂರು ರಾಜ್ಯದ ರೇಷ್ಮೆ ಇಲಾಖೆಯಲ್ಲಿ ಕೆಲಸ, ನಂತರ, ಅರಣ್ಯ ಇಲಾಖೆಯಲ್ಲಿ ಸೇವೆಗೆ ಸೇರಿದರು. ಭಾರತೀಯ ಅರಣ್ಯ ಸೇವಾ ಸದಸ್ಯರು, ಕರ್ನಾಟಕ ತೋಟಗಾರಿಕಾ ಇಲಾಖೆಯ ನಿರ್ದೇಶಕರು ಆಗಿದ್ದರು. ಕರ್ನಾಟಕದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾಗಿ ನಿವೃತ್ತರಾದರು. 

ಕೃತಿಗಳು: ಅರಣ್ಯಶಾಸ್ತ್ರ, ವನಸಿರಿ, ಖಗಸಿರಿ, ವನವೈಖರಿ, ಅರಣ್ಯ , ವನದರ್ಶನಂ ಇತ್ಯಾದಿ ಆಗಮಿಕರ ನಾಡು (ಅಮೆರಿಕ ಪ್ರವಾಸ ಕಥನ)., ಜಪಾನ್ (ಪ್ರವಾಸ ಕಥನ),  ಹರಿವು (ವನಪಾಲಕನೊಬ್ಬನ ಆತ್ಮಕಥೆಯಂತಿರುವ ಕೃತಿಯು ವನಪಾಲಕರಿಗೆ, ಮಕ್ಕಳಿಗೆ ಅರಣ್ಯ ಕುರಿತ ದಟ್ಟ ಅನುಭವ ನೀಡುವ ಕೃತಿ)

ಅಜ್ಜಂಪುರ ಕೃಷ್ಣಸ್ವಾಮಿ