About the Author

'ಅಂಶುಮಾಲಿ' (ಭಾಸ್ಕರ ಕನ್ಯಾನ) ಮೈಸೂರು ವಿಶ್ವವಿದ್ಯಾನಿಲಯದ ಎಂ.ಎ.(ಇಂಗ್ಲಿಷ್) ಪದವೀಧರ. ಅಂಶುಮಾಲಿ ಅಂಚೆ ಇಲಾಖೆಯಲ್ಲಿ ಹೆಡ್ ಪೋಸ್ಟ್ ಮಾಸ್ಟರ್ ಆಗಿದ್ದವರು. ಸಾಹಿತ್ಯ ಮತ್ತು ಸಂಗೀತ ಅವರ ಪ್ರವೃತ್ತಿಗಳು, ಕನ್ನಡ ಮತ್ತು ತುಳು ಭಾಷೆಗಳ ಕವಿಯಾಗಿ, ಕಾದಂಬರಿಕಾರರಾಗಿ ತಮ್ಮದೇ ಆದ ವಿಶಿಷ್ಟ ಲಾಸ್ಯ ದರ್ಶನದಿಂದ ಬದುಕನ್ನು ಪರಿಶೀಲಿಸುವ ಅಂಶುಮಾಲಿ ಕಡೆಂಗೋಡ್ಲು ಕಾವ್ಯಪ್ರಶಸ್ತಿ, ಮುದ್ದಣ ಕಾವ್ಯಪ್ರಶಸ್ತಿ, ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿಗಳನ್ನು ಪಡೆದಿರುವ ಅಪರೂಪದ ಉಭಯಭಾಷಾ ಕವಿ. ಬಂಟ್ವಾಳ ತಾಲೂಕು ೧೧ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನಾಧ್ಯಕ್ಷರಾಗಿದ್ದ ಅಂಶುಮಾಲಿ ಅವರ ಕೃತಿಗಳು: ಕವನ ಸಂಕಲನಗಳು - ಕನ್ಯಾನ, ಪ್ರತಿಭಾನ, ಕನ್ನಡ-ಕ. ನಾಟಕಗಳು : - ಕಿರಣ, ರೂಪಕ ರಾಮಾಯಣ, ಆನೆ ಮತ್ತು ಏನೊ, ತಲೆ ಬುರುಡೆ, ಪತೊಡೆ, ಅಂಧಕಾರಪುರ, ತುಳು ಕಾದಂಬರಿ "ಉಪ್ಪಡ್', ಕ್ಷೇತ್ರಪರಿಚಯ, ಭಕ್ತಿಗೀತೆಗಳನ್ನು ಬರೆದಿದ್ದಾರೆ.

ಅಂಶುಮಾಲಿ (ಭಾಸ್ಕರ ಕನ್ಯಾನ)