About the Author

ದಾವಣಗೆರೆ ತಾಲ್ಲೂಕು ಹೆಬ್ಬಾಳು ಗ್ರಾಮದ ಜಾನಕಮ್ಮ ಮತ್ತು ಎ.ತುಳುಜಾಚಾರ್ ಮಗನಾಗಿ ಜನಿಸಿದ ಆನಂದ ಹೆಬ್ಬಾಳು (ಜಾನಕಿತನಯಾನಂದ), ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ವೃತ್ತಿಯಲ್ಲಿ ತಂತ್ರಾಂಶ ವಿಭಾಗದ ಸೀನಿಯರ್ ಮ್ಯಾನೇಜರ್ ಆಗಿ ಪ್ರಸ್ತುತ ಸ್ನೈಡರ್ ಇಲೆಕ್ಟಿಕ್ ಸಂಸ್ಥೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದು,ಮೂವತ್ತು ವರ್ಷದ ಅನುಭವ ಹೊಂದಿದ್ದಾರೆ..ಜ್ಞಾನಾರ್ಜನೆಗೆ ಉನ್ನತ ವ್ಯಾಸಂಗ ಮುಂದುವರೆಸುವ ಸ್ವಇಚ್ಛೆಯಿಂದ ಈಗ ನ್ಯಾಷನಲ್ ವೇದಿಕ್ ಸೈನ್ಸ್‌ನಲ್ಲಿ ದಾಸಸಾಹಿತ್ಯದ ಒಂದು ವಿಷಯದಲ್ಲಿ ಸಂಶೋಧಕರಾಗಿ (ಪಿ.ಎಚ್.ಡಿ ಸ್ಕಾಲರ್), ಡಾ.ಎನ್.ಕೆ. ರಾಮಶೇಷನ್ ಮಾರ್ಗದರ್ಶನದಲ್ಲಿ ಕೆಲಸ ಆರಂಭಿಸಿದ್ದಾರೆ.

ದಾಸಶ್ರೇಷ್ಠರ ದಾಸಸಾಹಿತ್ಯ, ವಚನಕಾರರ ವಚನಸಾಹಿತ್ಯ, ಜಾನಪದ ಸಾಹಿತ್ಯವನ್ನು ತತ್ವಪದಗಳನ್ನು ಹಾಗೂ ನವೋದಯ ಸಾಹಿತ್ಯ ಅಭ್ಯಾಸ ಮಾಡುತ್ತಾ ಸಾಹಿತ್ಯಾಸಕ್ತಿ ಮೊಳೆತು ಮೂರುದಶಕಗಳಿಂದಲೂ ಸಾಹಿತ್ಯಕೃಷಿಯಲ್ಲಿ ತೊಡಗಿಸಿಕೊಂಡು ಇದುವರೆಗೆ ‌ಐದು ಕವನಸಂಕಲನಗಳನ್ನು ಹೊರತಂದಿದ್ದಾರೆ. 

ಕೃತಿಗಳು ; ಅನರ್ಘ್ಯ, ಜೀವನ ತರಂಗಗಳು, ಮಂಥನ, ಚಕ್ಷು, ಅಕ್ಷಯ (ಕವನಸಂಕಲನ)

ಆನಂದ ಎ.ಟಿ (ಜಾನಕಿತನಯಾನಂದ)