ಅನರ್ಘ್ಯ

Author : ಆನಂದ ಎ.ಟಿ

Pages 170

₹ 120.00
Year of Publication: 2021
Published by: ಶ್ರೇಯಸ್ ಬುಕ್ ಪಬ್ಲಿಕೇಷನ್ಸ್
Address: #31,ವೆನ್ಸಾರಾಯಲ್ ಹರಳುಕುಂಟೆ, ಸೋಮಸುಂದರಪಾಳ್ಯ, ಎಚ್. ಎಸ್. ಆರ್. 2ನೇಯ ಹಂತ ಬೆಂಗಳೂರು-560102
Phone: 9480702134

Synopsys

’ಅನರ್ಘ್ಯ’ ಕೃತಿಯು ಆನಂದ ಎ.ಟಿ (ಜಾನಕಿತನಯಾನಂದ) ಅವರ ಕವನಸಂಕಲನ. ಕೃತಿಗೆ ಹಿತನುಡಿ ಬರೆದಿರುವ ಪ್ರೊಫೆಸರ್ ಡಾ. ನಂದಾ ಅವರು, ಅನರ್ಘ್ಯ ಕವನ ಸಂಕಲನವು ಸಾಮಾಜಿಕ ಕಳಕಳಿ , ರೈತರ, ಸ್ರೀಯರ ಹಾಗೂ ಸೈನಿಕರ ಪಾತ್ರಗಳನ್ನು ಒಳಗೊಂಡು ಕತಾ ಚಿತ್ರಣದಲ್ಲಿ ಸುಂದರವಾಗಿ ಮೂಡಿಬಂದಿದೆ. ಬದುಕಿನ ನಶ್ವರಕ್ಕೆ ಆಧ್ಯಾತ್ಮಿಕ ಪಯಣ ಹಾಗೂ ಬದುಕಿನಲ್ಲಿ ಆಶಾವಾದವನ್ನು ಮೂಡಿಸುವ ಕವಿತೆಗಳು ಅತ್ಯಂತ ಸರಳ ಶಬ್ಧಗಳ ಮೂಲಕ ಓದುಗರನ್ನು ಸೆರೆ ಹಿಡಿಯುತ್ತವೆ. ಪುರಂದರ ದಾಸ ಹಾಗೂ ಕನಕದಾಸರ ವಿಚಾರಗಳು ಈ ಕವಿತೆಯಲ್ಲಿ ಅಲ್ಲಲ್ಲಿ ಕಾಣಸಿಗುತ್ತವೆ. ಹಾಗೆಯೇ, ವಚನಕಾರರ ಪ್ರಭಾವವು ಕವಿತೆಗಳ ಮೇಲೆ ನಿಚ್ಚಳವಾಗಿ ಇರುವುದು ಕಂಡುಬರುತ್ತದೆ. ಭಾರತೀಯ ಸಂಸ್ಕೃತಿಯ ಜೀವಂತಿಕೆಯ ಮೆರುಗು ಕೆಲವು ಕವಿತೆಗಳ ವಸ್ತುವಾಗಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಆನಂದ ಎ.ಟಿ

ಕವಿ ಆನಂದ ಎ.ಟಿ ( ಜಾನಕಿತಯಾನಂದ) ಅವರು ಮೂಲತಃ ದಾವಣಗೆರೆಯವರು. ಪ್ರಸ್ತುತ ಬೆಂಗಳೂರಿನಲ್ಲಿ ವಾಸವಿದ್ದಾರೆ. ಬಿ.ಇ, ಎಂ.ಎಸ್ ಹಾಗೂ ಎಂ.ಫಿಲ್( ಪಿ.ಹೆಚ್.ಡಿ ಸ್ಕಾಲರ್)  ಪದವೀಧರರು. ಬೆಂಗಳೂರಿನ ಸ್ನೈಡರ್ ಎಲ್ಕೆಟ್ರಿಕ್ ಕಂಪೆನಿಯಲ್ಲಿ ಜನರಲ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯ,ಸಂಗೀತ ಆಲಿಸುವುದು ಅವರ ಹವ್ಯಾಸ. ಕೃತಿಗಳು ; ಅನರ್ಘ್ಯ, ಜೀವನ ತರಂಗಗಳು, ಮಂಥನ, ಚಕ್ಷು, ಅಕ್ಷಯ (ಕವನಸಂಕಲನ) ...

READ MORE

Related Books