About the Author

ಕನ್ನಡ ಲೇಖಕ ಅನಂತ ಕಲ್ಲೋಳ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 1937ರ ಮಾರ್ಚ್ 24 ರಂದು ಜನಿಸಿದ್ದು, ಇವರ ತಾಯಿ ರಮಾಬಾಯಿ, ತಂದೆ: ಅಣ್ಣಾಜಿ. ಕರ್ನಾಟಕ ವಿ.ವಿ.ಯಿಂದ ಬಿ.ಎ. ಹಾಗೂ ಎಲ್ ಎಲ್ ಬಿ ಪದವೀಧರರು. ಕೇಂದ್ರ ಅಬಕಾರಿ ಹಾಗೂ ಸುಂಕ ಇಲಾಖೆಯ ನಿವೃತ್ತ ಸಹಾಯಕ ಕಮೀಷನರ್ . ಸದ್ಯ ಬೆಳಗಾವಿಯಲ್ಲಿ ವಾಸ.

ಹಾಸ್ಯ ಸಂಕಲನಗಳು:  ಬ್ರಹ್ಮ ಹಾಕಿದ ಗಂಟು, ರಾಜಾ ಪಾಯಿಂಟ್ , ವೈಭೋಗದ ವೈಖರಿ, ತಾಮ್ರದ ಕಡಗ, ಹಗರಣ ಕಂಡಲ್ಲಿ ಗುಂಡು ತಂಡು ಮುಂಡು ರೇಡಿಯೋದಿಂದ ವಿಡಿಯೋದವರೆಗೆ, ಮೂಗಿನ ತುದಿ, ಜೇನಿನ ಬಾಬು.

ಚರಿತ್ರೆ ಸಂಬಂಧಿತ ಕೃತಿಗಳು: ಕನಕದಾಸರು, ರಾಮದಾಸರು, ಸ್ವಾತಂತ್ರ್ಯವಿರ ಸಾವರಕರ, ಧೋಂಡೊ ಕೇಶವ ಕರ್ವೆ, ಬೆಳಗಿನ ಬೆಳಗು,  ಏಕಾಂಕ ನಾಟಕಗಳು: ಅದೇ ದಾರಿ ಕುಂಟಕಾಲಿಗೆ ವೈದ್ಯ ಕನ್ನಡ ಸಂಚು ೦೦೧ ಕಥಾಸಂಕಲನ ಕ್ಯಾಕ್ಟಸ್ ಮೋಹಮತ್ಸರ ಕರೆ ವೈಚಾರಿಕ ಚಿನ್ನ ನಿಯಂತ್ರಣ ಅಧಿನಿಯಮ ಮಹಾಜನ ವರದಿ ಅನುವಾದ ಸಾಹಿತ್ಯ : ಒಡೆಯನುಲಿದ ಪಾಡು (ಭಗವದ್ಗೀತೆಯ ಕನ್ನಡಾನುವಾದ) ಗಾಂಧಿ ಮತ್ತು ಅಂಬೇಡಕರ (ಮೂಲ ಮರಾಠಿ) ಸಂಪಾದನೆ ಬೆಳಗಾವಿ ಕರ್ನಾಟಕ ಸಂಘ ಮತ್ತು ವಾಚನಾಲಯ ಸ್ಮರಣಸಂಚಿಕೆ ಪ್ರಾ. ಪ್ರಹ್ಲಾದಕುಮಾರ ಭಾಗೋಜಿ ಸನ್ಮಾನ ಸಮಾರಂಭದ ಸ್ಮರಣ ಸಂಚಿಕೆ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ದಶಮಾನೋತ್ಸವ ಸ್ಮರಣ ಸಂಚಿಕೆ: ಸದಭಿಮಾನ,

ಪ್ರಶಸ್ತಿ-ಗೌರವಗಳು:  “ಹಗರಣ” ವಿನೋದ ಲೇಖನ ಸಂಕಲನಕ್ಕೆ ವರ್ಷದ ಶ್ರೇಷ್ಠ ವಿನೋದ ಸಾಹಿತ್ಯ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತಂಡ ಮುಂಡು” ಸಂಕಲನಕ್ಕೆ ಗೊರೂರು ಸ್ಮಾರಕ ಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, “ಮಹಾಜನ ವರದಿ” ಪುಸ್ತಕಕ್ಕೆ ಶ್ರೀ ಎಸ್. ಎಮ್. ಕುಲಕರ್ಣಿ ಷಷ್ಟ್ಯಬ್ದಿ ಸ್ಮರಣೆಯ ಪುರಸ್ಕಾರ ಹಾಗೂ ಚಿಕ್ಕೋಡಿ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷಸ್ಥಾನದ ಗೌರವ.

ಅನಂತ ಕಲ್ಲೋಳ

(24 Mar 1937)