ಸಮರ್ಥ ರಾಮದಾಸರು

Author : ಅನಂತ ಕಲ್ಲೋಳ

Pages 96

₹ 15.00




Year of Publication: 1975
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಸಮರ್ಥ ರಾಮದಾಸರು'  ಕೃತಿಯು ಹಿರಿಯ ಲೇಖಕ ಅನಂತ ಕಲ್ಲೋಳ ಅವರು ರಚಿಸಿದ್ದಾರೆ. ಶಿವಾಜಿಯ ಗುರು. ಸಹಮಾನವರಿಗೆ, ತಾಯ್ನಾಡಿಗೆ, ಸಲ್ಲಿಸಬೇಕಾದ ಸೇವೆ ಸಲ್ಲಿಸಿದಲ್ಲದೆ ಮುಕ್ತಿಯ ಯೋಚನೆ ಸಲ್ಲದು ಎಂದು ಉಪದೇಶಿಸಿದರು. ತಮ್ಮ ಕಾಲಕ್ಷೇಪಗಳಿಂದ ಕೀರ್ತನೆಗಳಿಂದ ಸಾವಿರಾರು ಮಂದಿಗೆ ಮಾರ್ಗದರ್ಶನ ಮಾಡಿದರು ಎಂಬುದಾಗಿ ರಾಮದಾಸರ ಬಗೆಗೆ ವಿವರಿಸಲಾಗಿದೆ. ತಮ್ಮ ಉಪದೇಶ ಮತ್ತು ಕೀರ್ತನೆಗಳಿಂದಲೇ ಸಹಸ್ರಾರು ಮಂದಿಯ ಮನ ಬದಲಾಯಿಸಿದ, ಉತ್ತಮ ದಾರಿ ತೋರಿಸಿದ ರಾಮದಾಸರ ಜೀವನದ ಹಲವಾರು ಪ್ರಮುಖ ಘಟ್ಟಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ.

About the Author

ಅನಂತ ಕಲ್ಲೋಳ
(24 March 1937)

ಕನ್ನಡ ಲೇಖಕ ಅನಂತ ಕಲ್ಲೋಳ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 1937ರ ಮಾರ್ಚ್ 24 ರಂದು ಜನಿಸಿದ್ದು, ಇವರ ತಾಯಿ ರಮಾಬಾಯಿ, ತಂದೆ: ಅಣ್ಣಾಜಿ. ಕರ್ನಾಟಕ ವಿ.ವಿ.ಯಿಂದ ಬಿ.ಎ. ಹಾಗೂ ಎಲ್ ಎಲ್ ಬಿ ಪದವೀಧರರು. ಕೇಂದ್ರ ಅಬಕಾರಿ ಹಾಗೂ ಸುಂಕ ಇಲಾಖೆಯ ನಿವೃತ್ತ ಸಹಾಯಕ ಕಮೀಷನರ್ . ಸದ್ಯ ಬೆಳಗಾವಿಯಲ್ಲಿ ವಾಸ. ಹಾಸ್ಯ ಸಂಕಲನಗಳು:  ಬ್ರಹ್ಮ ಹಾಕಿದ ಗಂಟು, ರಾಜಾ ಪಾಯಿಂಟ್ , ವೈಭೋಗದ ವೈಖರಿ, ತಾಮ್ರದ ಕಡಗ, ಹಗರಣ ಕಂಡಲ್ಲಿ ಗುಂಡು ತಂಡು ಮುಂಡು ರೇಡಿಯೋದಿಂದ ವಿಡಿಯೋದವರೆಗೆ, ಮೂಗಿನ ತುದಿ, ಜೇನಿನ ಬಾಬು. ಚರಿತ್ರೆ ಸಂಬಂಧಿತ ಕೃತಿಗಳು: ಕನಕದಾಸರು, ರಾಮದಾಸರು, ...

READ MORE

Related Books