ಜನಕ ಮಹಾರಾಜ

Author : ಅನಂತ ಕಲ್ಲೋಳ

Pages 70

₹ 15.00




Year of Publication: 2013
Published by: ರಾಷ್ಟ್ರೋತ್ಥಾನ ಸಾಹಿತ್ಯ
Address: ಬೆಂಗಳೂರು-19.

Synopsys

`ಜನಕ ಮಹಾರಾಜ' ರಾಮಾಯಣದ ಪಾತ್ರವಿದು. ಲೇಖಕ ಅನಂತ ಕಲ್ಲೋಳ ಅವರು ಈ ಕೃತಿಯನ್ನು  ರಚಿಸಿದ್ದಾರೆ. ಜನಕ ಮಹಾರಾಜರ ವೈಶಿಷ್ಟಗಳು, ಸೀತೆಯ ಹುಟ್ಟಿನ ಹಿಂದಿನ ಕಥನಗಳು, ಸೀತೆಯ ಜೀವನದಲ್ಲಿ ಜನಕ ಮಹಾರಾಜರ ಪಾತ್ರ, ತಂದೆಯ ಕರ್ತವ್ಯಗಳು ಹೀಗೆ ಹಲವಾರು ಅಯಾಮಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಈಗಿನ ಕಾಲಕ್ಕೆ ಪಾಠವಾಗುವಂತೆ ಲೇಖಕ ಅನಂತ ಕಲ್ಲೋಳ ಅವರು ಕೃತಿಯನ್ನು ರಚಿಸಿದ್ದಾರೆ. 

About the Author

ಅನಂತ ಕಲ್ಲೋಳ
(24 March 1937)

ಕನ್ನಡ ಲೇಖಕ ಅನಂತ ಕಲ್ಲೋಳ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ 1937ರ ಮಾರ್ಚ್ 24 ರಂದು ಜನಿಸಿದ್ದು, ಇವರ ತಾಯಿ ರಮಾಬಾಯಿ, ತಂದೆ: ಅಣ್ಣಾಜಿ. ಕರ್ನಾಟಕ ವಿ.ವಿ.ಯಿಂದ ಬಿ.ಎ. ಹಾಗೂ ಎಲ್ ಎಲ್ ಬಿ ಪದವೀಧರರು. ಕೇಂದ್ರ ಅಬಕಾರಿ ಹಾಗೂ ಸುಂಕ ಇಲಾಖೆಯ ನಿವೃತ್ತ ಸಹಾಯಕ ಕಮೀಷನರ್ . ಸದ್ಯ ಬೆಳಗಾವಿಯಲ್ಲಿ ವಾಸ. ಹಾಸ್ಯ ಸಂಕಲನಗಳು:  ಬ್ರಹ್ಮ ಹಾಕಿದ ಗಂಟು, ರಾಜಾ ಪಾಯಿಂಟ್ , ವೈಭೋಗದ ವೈಖರಿ, ತಾಮ್ರದ ಕಡಗ, ಹಗರಣ ಕಂಡಲ್ಲಿ ಗುಂಡು ತಂಡು ಮುಂಡು ರೇಡಿಯೋದಿಂದ ವಿಡಿಯೋದವರೆಗೆ, ಮೂಗಿನ ತುದಿ, ಜೇನಿನ ಬಾಬು. ಚರಿತ್ರೆ ಸಂಬಂಧಿತ ಕೃತಿಗಳು: ಕನಕದಾಸರು, ರಾಮದಾಸರು, ...

READ MORE

Related Books