About the Author

ಬೆ. ಕಾ. ಮೂರ್ತೀಶ್ವರಯ್ಯ ಅವರು ವೃತ್ತಿಯಲ್ಲಿ ವಕೀಲರು, ಪ್ರವೃತ್ತಿಯಲ್ಲಿ ಬರಗಾಹರರು. ಸಾಮಾಜಿಕ, ರಾಜಕೀಯ, ಆರ್ಥಿಕ, ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಇವರ 100ಕ್ಕೂ ಹೆಚ್ಚು ಲೇಖನಗಳು ನಾಡಿನ ಪ್ರಸಿದ್ಧ ಪತ್ರಿಕೆಗಳಾದ ಪ್ರಜಾವಾಣಿ ಕನ್ನಡ ಪ್ರಭ, ಮುಂಗಾರು ಸಂಯುಕ್ತ ಕರ್ನಾಟಕ, ಉದಯವಾಣಿ, ಪ್ರಜಾಮತ, ಜನಪದ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಇವರು ತಮ್ಮ ಪತ್ರಿಕಾ ಲೇಖನಗಳ ಪೈಕಿ ಆಯ್ದ ಲೇಖನಗಳನ್ನು ಅಭಿವ್ಯಕ್ತಿ ಸಂವೇದನೆ ಇತ್ಯಾದಿ, ಅರ್ಥ ಮತ್ತು ವ್ಯಾಪ್ತಿ', 'ಜನತೆ, ಸಮಾಜ ಮತ್ತು ಕಾನೂನು ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಇವರ ಪ್ರಕಟವಾದ ಪುಸ್ತಕಗಳಲ್ಲಿ ’ಅಭಿವ್ಯಕ್ತಿ, ಸಂವೇದನೆ ಇತ್ಯಾದಿ (1985), "ಅರ್ಥ ಮತ್ತು ವ್ಯಾಪ್ತಿ (1987) "ದೇವಪ್ಪ (19ಷು), ಪುಸ್ತಕಗಳಿಗೆ ಕರ್ನಾಟಕ ಸರ್ಕಾರದ ಕನ್ನಡ ಸಂಸ್ಕೃತಿ ನಿರ್ದೇಶನಾಲಯವು ಪುಸ್ತಕಗಳಿಗೆ ಯುವ ವಾರ್ಷಿಕ ನಗದು ಬಹುಮಾನ ದೊರೆತಿದೆ. ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಕಟಿಸಿರುವ ಕಲಾವಿದರ ಜೀವನ ಚರಿತ್ರೆಯ ಮಾಲೆಯಲ್ಲಿ ಇವರ ಒಂದು ಪುಸ್ತಕ ಪ್ರಕಟವಾಗಿದೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿವರ್ಷ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಶೇಷ ಲೇಖನಕ್ಕೆ ನೀಡುವ ಪಾಕ ಬಹುಮಾನಗಳಲ್ಲಿ ಒಂದಾದ 'ಖಾತ್ರಿ ಶಾಮಣ್ಣ ಪ್ರಶಸ್ತಿ'ಯು ಪ್ರಜಾಮತದಲ್ಲಿ ಪ್ರಕಟವಾಗಿದ್ದ ಕನ್ನಡ ಉಳಿಸಿ ವರ್ಷ ಮುಗಿದಿಲ್ಲ (1994) ಎಂಬ ಇವರ ಲೇಖನಕ್ಕೆ ದೊರೆತಿದೆ. ಭಾರತ ಸಂವಿಧಾನ ಸಂಕ್ಷಿಪ್ತ ಪರಿಚಯ (1997, ಎರಡು ಮತ್ತು ಮೂರನೆಯ ಮುದ್ರಣ 1999), ಮೋಟಾರು ವಾಹನಗಳ ಅಧಿನಿಯಮ (1994-2೦೦) ಕರ್ನಾಟಕ ಪೋಲೀಸ್ ಅಧಿನಿಯಮ (1998) ಕನ್ನಡದಲ್ಲಿ ಕ್ರಿಮಿನಲ್ ಪ್ಲೀಡಿಂಗ್ಸ್ (2000) ಇವರ ಇತರ ಪುಸ್ತಕಗಳು. ಪ್ರಸ್ತುತ ಇವರು ಕರ್ನಾರ ಡಾಟ ಭಾಷಾ (ವಿಭಾಗ) ಅಂಶೋಗದ ಸದಸ್ಯರಾಗಿರುತ್ತಾರೆ.

ಬೆ.ಕಾ. ಮೂರ್ತೀಶ್ವರಯ್ಯ