About the Author

ಶಿ.ಜು.ಪಾಶ ಎಂಬ ಕಾವ್ಯನಾಮದಿಂದಲೇ ಸಾಹಿತ್ಯ ಕೃಷಿಯಲ್ಲಿ ಚಿರಪರಿಚಿತರಾಗಿರುವ ಜುಬೇರ್ ಪಾಷ ಅವರು  ಈವರೆಗೆ  ಅಪ್ಪನ ಬೀಡಿ, ಕೋಳಿ ಹುಂಜದ ಹೂವು ಎಂಬ ಕವನಸಂಕಲನಗಳನ್ನು ಹೊರತಂದಿದ್ದಾರೆ. ಮತ್ತು ಕೆರೆಯಂಗಳದ ನವಾಬ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ಧಾರೆ. 

ಕರ್ನಾಟಕ ಮಾಧ್ಯಮ ಅಕಾಡೆಮಿ 2018ರಲ್ಲಿ ‘ಸಾಹಿತ್ಯ ಮತ್ತು ಪತ್ರಿಕೋದ್ಯಮ’ ಎಂಬ ಕೃತಿಯನ್ನು ಪ್ರಕಟಿಸಿ ಹೊರತಂದಿದ್ದಾರೆ. ಲಂಕೇಶ್ ಪ್ರಶಸ್ತಿ ಸೇರಿದಂತೆ ಹಲವು ಬಹುಮಾನಗಳು ಶಿ.ಜು ಪಾಶ ಅವರಿಗೆ ಸಂದಿವೆ.
ಕವಿತೆ, ಕಥೆ, ಪ್ರಬಂಧ ಬರೆಯುವುದರಲ್ಲಿ ವಿಶೇಷ ಆಸಕ್ತಿಯಿದ್ದು, ಕಳೆದ 23 ವರ್ಷಗಳಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

 

ಶಿ.ಜು. ಪಾಶ