ಅಪ್ಪನ ಬೀಡಿ

Author : ಶಿ.ಜು. ಪಾಶ

Pages 86

₹ 50.00




Year of Publication: 2002
Published by: ನೆನಪು ಪ್ರಕಾಶನ
Address: ನಂ.1, ಪಿ.ಎಲ್‌.ಡಿ. ಬ್ಯಾಂಕ್‌ ಕಾಂಪ್ಲೆಕ್ಸ್‌, ಬಾಲರಾಜ ಅರಸು ರಸ್ತೆ, ಶಿವಮೊಗ್ಗ

Synopsys

`ಅಪ್ಪನ ಬೀಡಿ’ ಶಿ.ಜು.ಪಾಶ ಅವರ ಕವನ ಸಂಕಲನವಾಗಿದೆ. ಇಲ್ಲಿನ ಕವನಗಳು ಕತ್ತಲಲ್ಲಿ ಹೊತ್ತಿಸಿದ ಬೆಂಕಿಯ ತೆಡಿಗಳು. ಆ ಚಿಕ್ಕ ಬೆಳಕಿನಲ್ಲಿಯೇ ಕವಿ ಪಾಶ ಅವರು ನಿಮ್ಮನ್ನು ಕರೆದೊಯ್ದೆ ಬಲರು; ಅಗಾಧವಾಗಿ ಮಡುವುಗಟ್ಟಿರುವ ಬೆಟ್ಟದಂತಹ ದುಃಖದ ಹಿಂಸೆಯಒಂದೊಂದೇ ಕವನದ ಮೂಲಕ ಈ ಕವನ ಸಂಕಲನದಲ್ಲಿ ತಿಳಿಸಿದ್ದಾರೆ.

About the Author

ಶಿ.ಜು. ಪಾಶ

ಶಿ.ಜು.ಪಾಶ ಎಂಬ ಕಾವ್ಯನಾಮದಿಂದಲೇ ಸಾಹಿತ್ಯ ಕೃಷಿಯಲ್ಲಿ ಚಿರಪರಿಚಿತರಾಗಿರುವ ಜುಬೇರ್ ಪಾಷ ಅವರು  ಈವರೆಗೆ  ಅಪ್ಪನ ಬೀಡಿ, ಕೋಳಿ ಹುಂಜದ ಹೂವು ಎಂಬ ಕವನಸಂಕಲನಗಳನ್ನು ಹೊರತಂದಿದ್ದಾರೆ. ಮತ್ತು ಕೆರೆಯಂಗಳದ ನವಾಬ ಎಂಬ ಕಥಾ ಸಂಕಲನವನ್ನು ಪ್ರಕಟಿಸಿದ್ಧಾರೆ.  ಕರ್ನಾಟಕ ಮಾಧ್ಯಮ ಅಕಾಡೆಮಿ 2018ರಲ್ಲಿ ‘ಸಾಹಿತ್ಯ ಮತ್ತು ಪತ್ರಿಕೋದ್ಯಮ’ ಎಂಬ ಕೃತಿಯನ್ನು ಪ್ರಕಟಿಸಿ ಹೊರತಂದಿದ್ದಾರೆ. ಲಂಕೇಶ್ ಪ್ರಶಸ್ತಿ ಸೇರಿದಂತೆ ಹಲವು ಬಹುಮಾನಗಳು ಶಿ.ಜು ಪಾಶ ಅವರಿಗೆ ಸಂದಿವೆ. ಕವಿತೆ, ಕಥೆ, ಪ್ರಬಂಧ ಬರೆಯುವುದರಲ್ಲಿ ವಿಶೇಷ ಆಸಕ್ತಿಯಿದ್ದು, ಕಳೆದ 23 ವರ್ಷಗಳಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ.    ...

READ MORE

Reviews

ಹೊಸತು -2003-ಜನವರಿ

ಬೀಡಿಯಾದರೂ ಅನ್ನಿ, ಸಿಗಾರ್ ಆದರೂ ಅನ್ನಿ! ಅಥವಾ ಬದುಕನ್ನೇ ಹಾಗನ್ನಿ!! ಕ್ಷಣ ಕ್ಷಣಕ್ಕೂ ಮುಗಿದು ಹೋಗುತ್ತಿರುವ ಉರಿಯುತ್ತಲೇ ಇಲ್ಲವಾಗುವ ಸಂಕೇತವದು. ಇಲ್ಲಿನ ಕವನಗಳು ಕತ್ತಲಲ್ಲಿ ಹೊತ್ತಿಸಿದ ಬೆಂಕಿಯ ಕಿಡಿಗಳು. ಆ ಚಿಕ್ಕ ಬೆಳಕಿನಲ್ಲಿಯೇ ಕವಿ ಪಾಶ ಅವರು ನಿಮ್ಮನ್ನು ಕರೆದೊಯ್ಯ ಬಲ್ಲರು; ಅಗಾಧವಾಗಿ ಮಡುವುಗಟ್ಟಿರುವ ಬೆಟ್ಟದಂತಹ ದುಃಖದ ಹಿಂಸೆಯ ಪಾರ್ಶ್ವಗಳನ್ನು ಒಂದೊಂದೇ ಕವನದ ಮೂಲಕ ಒಂದೊಂದಾಗಿ ತೋರಿಸಬಲ್ಲರು.

Related Books