About the Author

ಡಾ. ಸಿ. ವೀರಣ್ಣಅವರು ಸಂಶೋಧಕ, ಸಾಮಾಜಿಕ ಚಿಂತಕ. 1942 ಜೂನ್ 15ರಂದು ಜನನ. ಬೆಂಗಳೂರಿನ ಸರ್ಕಾರಿ ಕಲಾ ಕಾಲೇಜಿನಲ್ಲಿ ಎಂ.ಎ ಪದವಿಯನ್ನು ಪಡೆದಿರುವ ಅವರು ಐಚ್ಛಿಕ ಕನ್ನಡದಲ್ಲಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ(1967) ಅತಿಹೆಚ್ಚು ಅಂಕಗಳಿಸಿ ”ಪ್ರೊ.ಎ.ಆರ್.ಕೃಷ್ಣಶಾಸ್ತ್ರೀ ಸ್ಮಾರಕ ಸುವರ್ಣ ಪದಕವನ್ನು ಪಡೆದಿರುತ್ತಾರೆ. ಹಂಪಾ ನಾಗರಜಯ್ಯ ಅವರ ಮಾರ್ಗದರ್ಶನದಲ್ಲಿ ‘ಕನ್ನಡ ಕಾವ್ಯ ಕಂಡ ಹೆಣ್ಣು’ ಪ್ರಬಂಧ ಮಂಡಿಸಿ ಪಿ.ಎಚ್.ಡಿ ಪದವಿಯನ್ನು ಪಡೆದಿರುತ್ತಾರೆ. ತಮ್ಮ ಅಧ್ಯಾಪಕ ವೃತ್ತಿ ಜೀವನವನ್ನು ಆಚಾರ್ಯ ಪದವಿ ಕಾಲೇಜಿನಲ್ಲಿಆರಂಭಿಸಿದ ಅವರು, ಎರಡು ವರ್ಷಗಳ ನಂತರ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ 'ಡಾ.ಜಿ.ಎಸ್.ಶಿವರುದ್ರಪ್ಪ ಅವರ ಕನ್ನಡ ಅಧ್ಯಯನ ಕೇಂದ್ರ'ದಲ್ಲಿ ಸಂಶೋಧನಾ ಸಹಾಯಕರಾಗಿ ನೇಮಕಗೊಂಡರು. ನಂತರದಲ್ಲಿ ಕನ್ನಡ ಅಧ್ಯಾಪಕರಾಗಿ ಎಂ.ಎ ವಿದ್ಯಾರ್ಥಿಗಳಿಗೆ ಭೋದನೆಯನ್ನು ಮುಂದುವರೆಸಿದರು. ಮೂರು ದಶಕಗಳ ಕಾಲ ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿ ಮತ್ತು ಮುದ್ರಣಾಲಯದ ನಿರ್ದೇಶಕರಾಗಿಯೂ ಕಾರ್ಯ ನಿರ್ವಹಿಸಿದ್ದರು.  

ಕನ್ನಡ ಸಾಹಿತ್ಯ ಚಾರಿತ್ರಿಕ ಬೆಳವಣಿಗೆ ಕುರಿತು ಎರಡು ಬೃಹತ್ ಸಂಪುಗಳನ್ನು ಬರೆದಿದ್ದಾರೆ. .ಕ್ರಿ.ಶ. 1100 ರಿಂದ 1400 ರವರೆಗಿನ ಕನ್ನಡ ಸಾಹಿತ್ಯದ ಚಾರಿತ್ರಿಕ ಬೆಳವಣಿಗೆಯನ್ನುಒಳಗೊಂಡಿದೆ. 

ಕೃತಿಗಳು: ಹನ್ನೆರಡನೇ ಶತಮಾನದ ಕಾಯಕಜೀವಿಗಳ ಚಳುವಳಿ, ಬಸವಣ್ಣನ ವಚನಗಳು, ಪರ್ಯಾಯ ಸಂಸ್ಕೃತಿ ವಚನ ಸಂಪುಟ, ಕಾಯಕಜೀವಿಗಳ ಪರ್ಯಾಯ ಸಂಸ್ಕೃತಿ, ಕನ್ನಡ ಪ್ರತಿಭಟನೆ ಕಾವ್ಯ,  ಮಧ್ಯಕಾಲೀನ ಸಾಹಿತ್ಯ, 

 

ಸಿ. ವೀರಣ್ಣ

Awards