About the Author

ಲೇಖಕ ಗುರುರಾಜ್ ಸನಿಲ್ ಅವರು ಮೂಲತಃ ಉಡುಪಿ ಜಿಲ್ಲೆಯ ತೆಂಕುಪೇಟೆಯವರು. ತಂದೆ ಶೇಷಪ್ಪ,  ತಾಯಿ ಸುಂದರಿ. ಪ್ರಾಥಮಿಕ ಶಿಕ್ಷಣ ಉಡುಪಿಯ ಕಡಿಯಾಳಿ ಶಾಲೆಯಲ್ಲಿ ಮತ್ತು ಪ್ರೌಢ ವಿದ್ಯಾಭ್ಯಾಸವನ್ನು ಮುಂಬೈ ಪೋರ್ಟ್ ಹೈಸ್ಕೂಲಿನಲ್ಲೂ ಪೂರೈಸಿದರು. ಹವ್ಯಾಸದೊಂದಿಗೆ ಇವರ ಉರಗ ತಜ್ಞರು. 25 ಸಾವಿರಕ್ಕೂ ಅಧಿಕ ಹಾವುಗಳನ್ನು ಹಿಡಿದ ದಾಖಲೆ ಇವರದ್ದು. ಹಾವಿನ ಮೊಟ್ಟೆಗಳನ್ನು ಸಂಗ್ರಹಿಸಿ, ಕಾವು ನೀಡಿ ಮರಿಗಳನ್ನು ಮಾಡಿದ ನಂತರ ಅವುಗಳನ್ನು ಕಾಡಿಗೆ ಬಿಟ್ಟ ಪ್ರಸಂಗಗಳೂ ಇವೆ. "ನಮ್ಮ ಮನೆ ನಮ್ಮ ಮರ  ಸಂಸ್ಥೆಯೊಂದಿಗೆ ಈವರೆಗೆ 10ಸಾವಿರಕ್ಕೂ ಅಧಿಕ ಗಿಡಗಳನ್ನು ಬೆಳೆಸಿದ್ದಾರೆ. 

ಕೃತಿಗಳು:  ಹಾವು ನಾವು , ಹಾವು ನಾವು, ದೇವರ ಹಾವು : ನಂಬಿಕೆ - ವಾಸ್ತವ, ನಾಗಬೀದಿಯೊಳಗಿಂದ, ಹುತ್ತದ ಸುತ್ತ ಮುತ್ತ , ವಿಷಯಾಂತರ  (ಸಂಕ್ಷಿಪ್ತ ಆತ್ಮಕಥೆ),  ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು , ಗುಡಿ ಮತ್ತು ಬಂಡೆ (ಕಥಾಸಂಕಲನ), ನಾಗಬನವೆಂಬ ಸ್ವರ್ಗೀಯ ತಾಣ 

ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಮಧುರಚೆನ್ನ ದತ್ತಿ ಪುಸ್ತಕ ಪ್ರಶಸ್ತಿ (2010), ಕೃಷ್ಣಾನಂದ ಕಾಮತ ಸಾಹಿತ್ಯ ಪ್ರಶಸ್ತಿ (2018), ಕರುಣಾ ಅನಿಮಲ್ ವೆಲ್ ಫೇರ್ ಪ್ರಶಸ್ತಿ (2004), ಕರ್ನಾಟಕ ಅರಣ್ಯ ಇಲಾಖೆಯಿಂದ ಅರಣ್ಯ ಮಿತ್ರ ಪ್ರಶಸ್ತಿ (2013), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015), ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ (2016), ಸೌತ್ ಕೆನರಾ ಫೋಟೋಗ್ರಾಫರ್‍ಸ್ ಅಸೋಷಿಯೇಶನ್ ನಿಂದ ಉರಗ ಮಿತ್ರ ಪ್ರಶಸ್ತಿ (2017), ಉಡುಪಿ ಜಿಲ್ಲೆ ವರ್ತಕರ ಹಿತರಕ್ಷಣಾ ವೇದಿಕೆಯಿಂದ ಸೇವಾ ರತ್ನ ಪ್ರಶಸ್ತಿ (2018).  ಲಭಿಸಿವೆ.

ಗುರುರಾಜ್ ಸನಿಲ್

(14 Jun 1968)