About the Author

ಹ.ಕ. ರಾಜೇಗೌಡರು ಮೂಲತಃ ಮಂಡ್ಯ ನಾಗಮಂಗಲ ತಾಲ್ಲೂಕು ಹನುಮನಹಳ್ಳಿಯವರು. ಕೃಷಿಕ ಕುಟುಂಬದಲ್ಲಿ ಜನಿಸಿದ ರಾಜೇಗೌಡರು ನಾಡಿನ ಪ್ರಮುಖ ಸಂಶೋಧಕರಲ್ಲಿ ಒಬ್ಬರು.

ಕನ್ನಡ (ಎಂ.ಎ) ಸ್ನಾತಕೋತ್ತರ ಪದವೀಧರರಾದ ಅವರು ಬೆಂಗಳೂರು, ಕನಕಪುರದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ನಂತರ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನಾ ವಿಭಾಗಕ್ಕೆ ಸೇರಿದರು.

ರಾಷ್ಟ್ರಕವಿ ಕುವೆಂಪು, ದೇಜಗೌ, ಹಾ.ಮಾ.ನಾಯಕ ಅವರ ಪ್ರಭಾವಲಯದಲ್ಲಿ ಗುರುತಿಸಿಕೊಂಡಿದ್ದ ಅವರು ತಮ್ಮ ಸಂಶೋಧನಾ ಕೃತಿಗಳ ಮೂಲಕ ಸಾಹಿತ್ಯಕ ವಲಯದಲ್ಲಿ ಗಣನೀಯ ಕೆಲಸ ಮಾಡಿದ್ದಾರೆ.

ವಿಮರ್ಶಾ ಕೃತಿ ’ವಿವೇಚನೆ’ ಕಥಾಸಂಕಲನಗಳಾದ ’ಜಗ್ಗಿನ ಜನಪದ ಕಥೆಗಳು’,’ಮಳೆ ಹುಯ್ಯುತ್ತಿದೆ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ರಾಜೇಗೌಡ ಅವರು ಹಿಂದಿ, ಮರಾಠಿ,

ತಮಿಳು, ಮಲೆಯಾಳಂ, ಒರಿಯಾ, ಪಂಜಾಬಿ ಭಾಷೆಗಳ ಕಥೆಗಳನ್ನು ಅನುವಾದಿಸಿ ಪ್ರಕಟಿಸಿದ್ದಾರೆ.

ಹ.ಕ. ರಾಜೇಗೌಡ