About the Author

ಬಿ. ಎಸ್ಸಿ ಪದವೀಧರರಾಗಿರುವ ಎಚ್. ಎನ್. ಗೀತಾ ಅವರಿಗೆ ಬಾಲ್ಯದಿಂದಲೇ ಕವನ ರಚನೆಯಲ್ಲಿ ಆಸಕ್ತಿ. ಜಾಹಿರಾತು ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದಾಗ ಅನುವಾದದಲ್ಲೂ ಆಸಕ್ತಿ ಬೆಳೆಸಿಕೊಂಡರು. 

ಅಚಲ ಪತ್ರಿಕಾ ಬಳಗದಲ್ಲಿ ಕಾರ್ಯ ನಿರ್ವಹಿಸಿರುವ ಅವರಿಗೆ ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಪ್ರಸ್ತುತ ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಉದ್ಯೋಗಿಯಾಗಿರುವ ಅವರಿಗೆ ಸಂಗೀತ, ಪ್ರವಾಸ ಹಾಗೂ ಚಾರಣಗಳಲ್ಲಿ ಆಸಕ್ತಿ, ನವಕರ್ನಾಟಕ ಪ್ರಕಟಿಸಿರುವ 'ಬಹುರೂಪಿ ಗಾಂಧಿ' ಮತ್ತು ಅಸ್ಸಾ ನಾಡಿಯಾ ’ಅಮ್ಮನಿಗೆ ಹಜ್ ಬಯಕೆ’ ಪುಸ್ತಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಎಚ್.ಎನ್. ಗೀತಾ