About the Author

ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು  ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವೀಧರರು. ಹಿರಿಯ ಶ್ರೇಣಿ ಉಪನ್ಯಾಸಕರಾಗಿ ನಿವೃತ್ತರು. ಬೆಂಗಳೂರು ಹಾಗೂ ಕಲಬುರಗಿ ದೂರದರ್ಶನದಲ್ಲಿ ಬೆಳಗು ಹಾಗೂ ಸಾಹಿತ್ಯ ಸಂಪದ ಕಾರ್ಯಕ್ರಮಗಳಲ್ಲಿ ಇವರ ವಿಚಾರಗಳು ಪ್ರಸಾರವಾಗಿವೆ.  ವಿವಿಧ ವಿಚಾರ ಸಂಕಿರಣ, ಶಿಬಿರ, ಸಮ್ಮೇಳನಗಳಲ್ಲಿ ಉಪನ್ಯಾಸ ಮಂಡಿಸಿದ್ದಾರೆ. ತಂದೆ ಭೀಮಶಾ ದೊಡ್ಡಮನಿ. 

ಕೃತಿಗಳು: ನೊಂದವರ ಹಾಡು, ನಮ್ಮ ದೇಶ ನಮ್ಮ ಜನ, ಆಕ್ರೋಶ, ಮರೆಯದ ಮಾಣಿಕ್ಯ, ಪಂಚಾಯತಿ, ಹಚ್ಚಡದ ಪದರಾಗ, ಸೊಲ್ಲೆತ್ತಿ ಹಾಡೇನ, ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ,(ಕವನ ಸಂಕಲನಗಳು),  ಬೆಳ್ಳಕ್ಕಿ ಮೂಡ್ಯಾವ, ಶಾರಿ ಶ್ಯಾಣಾ ಆದಾಗ (ಕಥಾ ಸಂಕಲನ), ದೇವಿಕಾರ್ಯ, ಏಡ್ಸ್ ಬಂತು, ಬಲಿಪಶು (ನಾಕಟಗಳು), ಸುಕ್ಷೇತ್ರ ಘತ್ತರಗಿ (ಜಾನಪದ ಸಂಶೋಧನೆ), ಜ್ಞಾನಜ್ಯೋತಿ (ಸ್ಮರಣ ಸಂಚಿಕೆ), ಜಾನಪದ ಹಬ್ಬಗಳು ಮತ್ತು ಉತ್ಸವಗಳು( ಸಂಶೋಧನೆ), ಘತ್ತರಗಿ ಭಾಗಮ್ಮ (ಚರಿತ್ರೆ), ಚುಂಚೂರು ಮಾಪುರತಾಯಿ: ಒಂದು ಅಧ್ಯಯನ (ಸಂಶೋಧನಾ ಪ್ರಬಂಧ), ಜಾನಪದ ತೊಟ್ಟಿಲು (ಜಾನಪದ ಸಂಶೋಧನೆ), ಪಂಚಮ ಸಂಪುಟ (ಆತ್ಮಕಥನ), 

ಪ್ರಶಸ್ತಿ-ಪುರಸ್ಕಾರಗಳು: ಕಲಬುರಗಿಯ ಮಹಾಂತ ಜ್ಯೋತಿ ಪ್ರತಿಷ್ಠಾನ ಟ್ರಸ್ಟ್ ನಿಂದ ಯುವರತ್ನ ಪ್ರಶಸ್ತಿ ಕಾಯಕ ರತ್ನ ಪ್ರಶಸ್ತಿ, ಅಫಜಲಪುರದ ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ, ಸಾಕ್ಷಿ ಪ್ರತಿಷ್ಠಾನದ ತಾಲೂಕು ಧರಿನಾಡು ಸಂಘದಿಂದ ಶ್ರೀ ಹರಿಶ್ಚಂದ್ರ ದಿಕ್ಸಂಗಿಕರ್ ’ ಜಾನಪದ ಪ್ರಶಸ್ತಿ, ಸುವರ್ಣ ಕನ್ನಡಿಗ ರಾಜ್ಯ ಪ್ರಶಸ್ತಿ, ಚುಂಚೂರು ಮಾಪುರೆ ತಾಯಿ : ಒಂದು ಅಧ್ಯಯನ ಕೃತಿಗೆ ‘ನೂರುಂದಪ್ಪ ರಾಷ್ಟ್ರ ಪ್ರಶಸ್ತಿ, ಪಂಚಮ ಆತ್ಮಕಥೆ ಕೃತಿಗೆ 2009ರಲ್ಲಿ ಪುಸ್ತಕ ಪ್ರಶಸ್ತಿ, ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ (2011) ಗೌರವ  ಕಲಬುರಗಿ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಗೌರವ, ‘ಜಾನಪದ ಸಂಗಮ’ ಕೃತಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಬಿಸಿಲು ಬೆಳದಿಂಗಳು ಕೃತಿಗೆ ರಾಜ್ಯೋತ್ಸವ ಪ್ರಶಸ್ತಿ, ಕಲಬುರಗಿಯ ವಿಶ್ವಜ್ಯೋತಿ ಪ್ರತಿಷ್ಠಾನದಿಂದ ಡಿವಿಜಿ ಪ್ರಶಸ್ತಿ, ಕರ್ನಾಟಕ ರಾಜ್ಯ ಸರಕಾರದಿಂದ ‘ಉತ್ತಮ (2014) ಉಪನ್ಯಾಸಕ ಪ್ರಶಸ್ತಿ,  

ಹನುಮಂತರಾವ್ ಬಿ. ದೊಡ್ಡಮನಿ

(01 Jun 1958)