ಜಾನಪದ ತೊಟ್ಟಿಲು

Author : ಹನುಮಂತರಾವ್ ಬಿ. ದೊಡ್ಡಮನಿ

Pages 131

₹ 100.00




Year of Publication: 2009
Published by: ಶಾಂತಕುಮಾರ ಪ್ರಕಾಶನ
Address: ಮಲ್ಲಾಬಾದ್, ತಾ: ಅಫಜಲಪುರ, ಜಿಲ್ಲೆ: ಕಲಬುರಗಿ

Synopsys

ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು ಜಾನಪದ ಸಾಹಿತ್ಯಕ್ಕೆ ಸಂಬಂಧಿಸಿ ಬರೆದ 10 ಲೇಖನಗಳ ಸಂಗ್ರಹ ಕೃತಿ-ಜಾನಪದ ತೊಟ್ಟಿಲು. ಇಂದಿನ ಶ್ರೇಷ್ಠ ಸಾಹಿತ್ಯ ಎನ್ನುವುದು ಅಕ್ಷರಲೋಕದ ಸರಕಾದರೆ,ಜನಪದ ಸಾಹಿತ್ಯ ಅನಕ್ಷರಸ್ಥ ಶ್ರಮದ ಸುಖದುಃಖದ, ನೋವು-ನಲಿವಿನ ಮೂಲಕ ಹೊರ ಹೊಮ್ಮಿದ ಸಹಜ ಸೃಷ್ಟಿ, ಜನರಿಂದ, ಜನರಿಗಾಗಿ, ಜನರಿಗೋಸ್ಕರವೇ, ಹುಟ್ಟಿದ್ದು ಜಾನಪದ ಸಾಹಿತ್ಯ- ಸಂಸ್ಕೃತಿ. ಇಂತಹ ಜಾನಪದವನ್ನು ಹೊರತುಪಡಿಸಿ ಜಗತ್ತಿನ ಯಾವ ಸಾಹಿತವೂ,ಸಂಸ್ಕೃತಿಯೂ, ಬಹುದಿನಗಳ ಕಾಲ ಜೀವಂತವಾಗಿರಲಾರದು. ಈ ಸಾಹಿತ್ಯವು ನಿಂತ ನೀರಲ್ಲ ಕಾಲದೊಂದಿಗೆ ಪ್ರವಹಿಸುತ್ತಾ ಪರಿವರ್ತನೆಗೊಳ್ಳುತ್ತಾ ಬರುವಂತದ್ದು.ಸತ್ವಯುತವಾದ ಸಾಹಿತ್ಯ ಮತ್ತು ಸಂಸ್ಕೃತಿ ಎನ್ನುವುದು ಸತ್ಯವಾದರೂ ಶುದ್ಧ ಜಾನಪದವಂತೂ ಜನ ಮನಸ್ಸಿನಿಂದ,ಆಚರಣೆಯಿಂದ- ಅನುಸರಣೆಯಿಂದ ಮರೆಯಾಗುತ್ತಿದೆ ಎಂಬ ಆತಂಕ ಇದೆ. ಇಂತಹ ಜಾನಪದವನ್ನು ಇಂದು ವೈಜ್ಞಾನಿಕ ನೆಲೆಯಲ್ಲಿ ಅಧ್ಯಯನ ಮಾಡಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ"ಜಾನಪದ ತೊಟ್ಟಿಲು"ಕೃತಿ ಹೊರಬಂದಿದೆ.

ಜಾನಪದ ಸಾಹಿತ್ಯದಲ್ಲಿ ಜೀವನ ಮೌಲ್ಯ, ಹಬ್ಬಗಳಲ್ಲಿ ಶಿವಶರಣರು, ಕಲ್ಬುರ್ಗಿ ಜಿಲ್ಲೆಯ ಬೈಲಾಟಗಳು, ಜಾನಪದ ಮತ್ತು ಜಾಗತೀಕರಣ, ಮೂಢನಂಬಿಕೆ ಮತ್ತು ವೈಜ್ಞಾನಿಕತೆ ಹೀಗೆ ಇನ್ನೂ ಅನೇಕ ಲೇಖನಗಳು ಜಾನಪದ ಸಾಹಿತ್ಯ ಸಂಸ್ಕೃತಿಯ ಕಳಕಳಿ ಕಾಳಜಿ ಹಾಗೂ ವೈಜ್ಞಾನಿಕ ಚಿಂತನೆಗೆ ಸಾಕ್ಷಿಯಾಗಿವೆ. ಜಾನಪದ ಸಾಹಿತ್ಯ ತ್ರಿಪದಿ,ಲಾವಣಿ, ಗೀಗೀಪದ,ಕಥನ,ಡೊಳ್ಳಿನ ಹಾಡು, ತತ್ವಪದ, ಸೋಬಾನೆ ಹಾಡು ಹೀಗೆ ವಿವಿಧ ಪ್ರಕಾರಗಳಲ್ಲಿ ಸ್ತ್ರೀ-ಪುರುಷ ಬದುಕಿನ ತಳಮಳ,ಆದರ್ಶಗಳು, ಎಚ್ಚರಿಕೆ ಬೋಧೆಗಳು ಅಡಕವಾಗಿವೆ. ಇಂತಹ ಹಲವಾರು ಅಂಶಗಳ ಕಡೆಗೆ ಲೇಖಕರು ಗಮನಹರಿಸಿದ್ದಾರೆ. ಅಫಜಲಪುರ ತಾಲೂಕಿನ ಜನಪದ ಸಾಹಿತ್ಯ, ಜನಪದ ಸಾಹಿತ್ಯಕ್ಕೆ ಕಲಬುರ್ಗಿ ಜಿಲ್ಲೆಯ ಕೊಡುಗೆ, ಕಲ್ಬುರ್ಗಿ ಜಿಲ್ಲೆಯ ಬೈಲಾಟಗಳು' ಲೇಖನಗಳು ಆಯಾ ತಾಲ್ಲೂಕು ಹಾಗೂ ಜಿಲ್ಲೆಯಲ್ಲಿನ ವೈವಿಧ್ಯಮಯ ಜಾನಪದ ಸಾಹಿತ್ಯವನ್ನು ಪರಿಚಯಿಸುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ವಿವಿಧ ಕಡೆಗಳಲ್ಲಿ ಮಂಡಿಸಿದ ಉಪನ್ಯಾಸಗಳನ್ನು ಕ್ರೋಢಿಕರಿಸಿದ ಕೃತಿ ಇದು.

About the Author

ಹನುಮಂತರಾವ್ ಬಿ. ದೊಡ್ಡಮನಿ
(01 June 1958)

ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು  ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವೀಧರರು. ಹಿರಿಯ ಶ್ರೇಣಿ ಉಪನ್ಯಾಸಕರಾಗಿ ನಿವೃತ್ತರು. ಬೆಂಗಳೂರು ಹಾಗೂ ಕಲಬುರಗಿ ದೂರದರ್ಶನದಲ್ಲಿ ಬೆಳಗು ಹಾಗೂ ಸಾಹಿತ್ಯ ಸಂಪದ ಕಾರ್ಯಕ್ರಮಗಳಲ್ಲಿ ಇವರ ವಿಚಾರಗಳು ಪ್ರಸಾರವಾಗಿವೆ.  ವಿವಿಧ ವಿಚಾರ ಸಂಕಿರಣ, ಶಿಬಿರ, ಸಮ್ಮೇಳನಗಳಲ್ಲಿ ಉಪನ್ಯಾಸ ಮಂಡಿಸಿದ್ದಾರೆ. ತಂದೆ ಭೀಮಶಾ ದೊಡ್ಡಮನಿ.  ಕೃತಿಗಳು: ನೊಂದವರ ಹಾಡು, ನಮ್ಮ ದೇಶ ನಮ್ಮ ಜನ, ಆಕ್ರೋಶ, ಮರೆಯದ ಮಾಣಿಕ್ಯ, ಪಂಚಾಯತಿ, ಹಚ್ಚಡದ ಪದರಾಗ, ಸೊಲ್ಲೆತ್ತಿ ಹಾಡೇನ, ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ,(ಕವನ ಸಂಕಲನಗಳು),  ಬೆಳ್ಳಕ್ಕಿ ಮೂಡ್ಯಾವ, ಶಾರಿ ಶ್ಯಾಣಾ ಆದಾಗ (ಕಥಾ ಸಂಕಲನ), ದೇವಿಕಾರ್ಯ, ಏಡ್ಸ್ ...

READ MORE

Related Books