ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ

Author : ಹನುಮಂತರಾವ್ ಬಿ. ದೊಡ್ಡಮನಿ

Pages 316

₹ 250.00




Year of Publication: 2020
Published by: ಶ್ರೀ ಕೋರಣೇಶ್ವರ ವಿವಿದೋದ್ಧೇಶ ಸಹಕಾರ ಸಂಘ ನಿಯಮಿತ
Address: ಖಜೂರಿ ತಾ: ಆಳಂದ, ಜಿಲ್ಲೆ: ಕಲಬುರಗಿ

Synopsys

ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು ಖಜೂರಿಯ ಶ್ರೀ ಕೋರಣೇಶ್ವರ ಅವರ ಕುರಿತು ಬರೆದ ಕವನಗಳನ್ನು ಒಳಗೊಂಡಿದೆ, ಆಳಂದ ತಾಲೂಕಿನ ಖಜೂರಿ ಕ್ಷೇತ್ರದ ಶ್ರೀ ಕೋರಣೇಶ್ವರ ಹಾಗೂ ಶ್ರೀ ಮುರುಘೇಂದ್ರ ಶರಣರ ಕುರಿತು 1985 ಜಾನಪದ ತ್ರಿಪದಿಗಳನ್ನುಕವಿಗಳು ರಚಿಸಿದ್ದಾರೆ. ಚರಿತ್ರೆ, ಪುರಾಣ ವಿಷಯ ವಸ್ತು ಕಾವ್ಯಾಂಶವಾಗಿದೆ. 

ಸಾಹಿತಿ ಪ್ರೊ:ಶಿವರಾಜ ಪಾಟೀಲ ಅವರು ಮುನ್ನುಡಿ ಬರೆದು ‘ಶ್ರೀ ಕೋರಣೇಶ್ವರ ಹಾಗೂ ಶ್ರೀ ಮುರುಘೇಂದ್ರ ಶರಣರ ತಾತ್ವಿಕ-ಸೈದ್ಧಾಂತಿಕ ನಿಲುವುಗಳು ಕಾವ್ಯದ ಪ್ರಮುಖ ಅಂಶಗಳಾಗಿವೆ. ಬರಹ ಶೈಲಿಯು ಅಪ್ಯಾಯಮಾನ, ಸರಳ, ಸುಂದರ ಹಾಗೂ ಮನಾಕರ್ಷಕವಾಗಿದೆ. ಆದ್ದರಿಂದ, ಖಜೂರಿಯ ಶ್ರೀ ಕೋರಣೇಶ್ವರ ಕಾವ್ಯ ದರ್ಶನವಾಗಿದೇ ಈ ಕೃತಿಯು ಕನ್ನಡ ತ್ರಿಪದಿಯ ಪುರಾಣ ಕಾವ್ಯ ಎಂದೇ ಪರಿಗಣಿಸಬೇಕು; ಏಕೆಂದರೆ ಅಂತಹ ಕಾವ್ಯ ಶೈಲಿ ಇದೆ, ಕಾವ್ಯ ಬಂಧವಿದೆ. ಕರಿಬಸವೇಶ್ವರರು, ಕೋರಣೇಶ್ವರರು, ಮುರುಘೇಂದ್ರ ಕೋರಣೇಶ್ವರರ ಭಕ್ತಿ ಸಂಬಂಧ, ಗುರುಶಿಷ್ಯರ ಸಂಬಂಧ, ಶ್ರೀಮಠದ ಪರಂಪರೆಯನ್ನು, ಇತಿಹಾಸವನ್ನು ಈ ಕಾವ್ಯ ಕೃತಿಯು ಗಟ್ಟಿಗೊಳಿಸಿದೆ.  ಈ ಕೃತಿಯ ಹೆಗ್ಗಳಿಕೆ ಹಾಗೂ ವಿಶೇಷತೆ ಎಂದರೆ ಒಂದು: ಸುಂದರ ಹಾಗೂ ಸುಲಲಿತವಾದ ತ್ರಿಪದಿಯ ಶೈಲಿ, ಎರಡು: ಶ್ರೀ ಕೋರಣೇಶ್ವರ ಹಾಗೂ ಶ್ರೀ ಮುರುಘೇಂದ್ರರ ಚರಿತ್ರೆ’ ಎಂದು ಪ್ರಶಂಸಿಸಿದ್ದಾರೆ.

ಕೃತಿಗೆ ಬೆನ್ನುಡಿ ಬರೆದ ಪ್ರೊ. ಬಸವರಾಜ ಪಾಟೀಲ ಅವರು ‘ತ್ರಿಪದಿ ಸಾಹಿತ್ಯದ ಮೂಲಕವೇ ಶ್ರೀ ಕೋರಣೇಶ್ವರ ಹಾಗೂ ಶ್ರೀ ಮುರುಘೇಂದ್ರರ ಚರಿತ್ರೆಯನ್ನು ಕಟ್ಟಿಕೊಟ್ಟದ್ದು ಶ್ಲಾಘನೀಯ’ ಎಂದು ಅಭಿಪ್ರಾಯಪಟ್ಟಿದ್ದಾರೆ. ಸಾಹಿತಿ  ಶಿವಶಾಂತರೆಡ್ಡಿ ಮುನಹಳ್ಳಿ ಪ್ರತಿಕ್ರಿಯಿಸಿದ್ದರೆ, ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಅವರು ಲೇಖಕರನ್ನು ಅಭಿನಂದಿಸಿದ್ದಾರೆ. 

 

About the Author

ಹನುಮಂತರಾವ್ ಬಿ. ದೊಡ್ಡಮನಿ
(01 June 1958)

ಲೇಖಕ ಡಾ. ಹನುಮಂತರಾವ್ ಬಿ. ದೊಡ್ಡಮನಿ ಅವರು  ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ. ಸ್ನಾತಕೋತ್ತರ ಪದವೀಧರರು. ಹಿರಿಯ ಶ್ರೇಣಿ ಉಪನ್ಯಾಸಕರಾಗಿ ನಿವೃತ್ತರು. ಬೆಂಗಳೂರು ಹಾಗೂ ಕಲಬುರಗಿ ದೂರದರ್ಶನದಲ್ಲಿ ಬೆಳಗು ಹಾಗೂ ಸಾಹಿತ್ಯ ಸಂಪದ ಕಾರ್ಯಕ್ರಮಗಳಲ್ಲಿ ಇವರ ವಿಚಾರಗಳು ಪ್ರಸಾರವಾಗಿವೆ.  ವಿವಿಧ ವಿಚಾರ ಸಂಕಿರಣ, ಶಿಬಿರ, ಸಮ್ಮೇಳನಗಳಲ್ಲಿ ಉಪನ್ಯಾಸ ಮಂಡಿಸಿದ್ದಾರೆ. ತಂದೆ ಭೀಮಶಾ ದೊಡ್ಡಮನಿ.  ಕೃತಿಗಳು: ನೊಂದವರ ಹಾಡು, ನಮ್ಮ ದೇಶ ನಮ್ಮ ಜನ, ಆಕ್ರೋಶ, ಮರೆಯದ ಮಾಣಿಕ್ಯ, ಪಂಚಾಯತಿ, ಹಚ್ಚಡದ ಪದರಾಗ, ಸೊಲ್ಲೆತ್ತಿ ಹಾಡೇನ, ಖಜೂರಿ ಶ್ರೀ ಕೋರಣೇಶ್ವರ ಕಾವ್ಯ ದರ್ಶನ,(ಕವನ ಸಂಕಲನಗಳು),  ಬೆಳ್ಳಕ್ಕಿ ಮೂಡ್ಯಾವ, ಶಾರಿ ಶ್ಯಾಣಾ ಆದಾಗ (ಕಥಾ ಸಂಕಲನ), ದೇವಿಕಾರ್ಯ, ಏಡ್ಸ್ ...

READ MORE

Related Books