About the Author

ಜಾನಪದ ತಜ್ಞ, ಸಾಹಿತಿ ಹಿ.ಶಿ.ರಾಮಚಂದ್ರೇಗೌಡ ಅವರು ದೇಸೀ-ಸಂಸ್ಕೃತಿಯ ಬಹುಮುಖ್ಯ ಚಿಂತಕರು. ಎಲ್ಲ ತರಹದ ಜೀವವಿರೋಧಿ ಸಿದ್ಧಾಂತಗಳನ್ನು ಸಾರಾಸಗಟಾಗಿ ಓಡಿಸಬೇಕು ಎಂಬ ಸಾತ್ವಿಕ ಸಿಟ್ಟಿನ ಕುಲುಮೆಯಲ್ಲಿ ಅವರ ಬರಹಗಳು ಹುಟ್ಟುತ್ತವೆ. ‘ಭೂಮಿ ಮತ್ತು ಹಿಂಸೆ, ರಾಮ ಅಳುತ್ತಿದ್ದಾನೆ, ಕ್ಲಿಂಟನ್ ನಗು, ಜಾನಪದ ಸಾಂಸ್ಕೃತಿಕ ಆಯಾಮಗಳು, ಜಾನಪದ ತಡಕಾಟ, ಪುರದ ಪುಣ್ಯ, ಜಾನಪದದ ನ್ಯಾಯ, ಜಾನಪದ ಪ್ರಕೃತಿ’ ಮುಂತಾದ 25ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದಾರೆ. 

ಹಿ.ಶಿ. ರಾಮಚಂದ್ರೇಗೌಡ