About the Author

ಹೆಗ್ಗೋಡಿನ ನಿನಾಸಂ ರಂಗಶಿಕ್ಷಣ ಕೇಂದ್ರದಲ್ಲಿ ಕೆ.ಜಿ.ಮಹಾಬಲೇಶ್ವರ ಅವರು ಅಧ್ಯಾಪಕರಾಗಿದ್ದರು. ಹಳಗನ್ನಡ ಕಾವ್ಯದಲ್ಲಿ ಆಸಕ್ತರಾಗಿದ್ದ ಅವರು ಪಂಪನ ವಿಕ್ರಮಾರ್ಜುನ ವಿಜಯ ಹಾಗೂ ಗದಾಯುದ್ಧ ಕಾವ್ಯಗಳನ್ನು ಹೊಸ ಓದುಗರಿಗೆ ಸಂಪಾದಿಸಿ ಕೊಟ್ಟಿದ್ದಾರೆ.

ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕಲೆ, ಸಾಹಿತ್ಯ, ರಂಗಭೂಮಿಯ ಸೆಳೆತದಿಂದಾಗಿ ನೀನಾಸಂ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ, ರಂಗಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. ಸಾಗರ ತಾಲ್ಲೂಕಿನ ಹೆಗ್ಗೋಡಿನವರಾದ ಕೆ.ಜಿ. ಮಹಾಬಲೇಶ್ವರ ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಮೂಲತಃ ಕೃಷಿ ಕುಟುಂಬದಿಂದ ಬಂದ ಇವರು ಕಲೆ, ಸಾಹಿತ್ಯ, ರಂಗಭೂಮಿಯ ಸೆಳೆತದಿಂದಾಗಿ ನೀನಾಸಂ ರಂಗಚಟುವಟಿಕೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುತ್ತಾ, ರಂಗಶಿಕ್ಷಣ ಕೇಂದ್ರದಲ್ಲಿ ವಿದ್ಯಾರ್ಥಿಯಾಗಿ, ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದವರು. 

ಬೆರಳೆಣಿಕೆಯ ಹಳಗನ್ನಡ ವಿದ್ವಾಂಸರಲ್ಲಿ ಒಬ್ಬರಾದ ಅವರು ಭಾರತೀಯ ಕಾವ್ಯ ಮೀಮಾಂಸೆ, ಆನಂದವರ್ಧನನ ಧ್ವನಿ ಸಿದ್ಧಾಂತ, ಅಭಿನವಗುಪ್ತನ ರಸ ಸಿದ್ಧಾಂತ, ಭರತನ ನಾಟ್ಯ ಶಾಸ್ತ್ರಗಳ ವಿಶ್ಲೇಷಣೆ ಬೋಧನೆಯಲ್ಲಿ ಹೆಸರಾಗಿದ್ದಾರೆ. ಹಳಗನ್ನಡ ಕಾವ್ಯ ಸಾಲುಗಳಿಗೆ ರಂಗಬೆಳಕಿನಲ್ಲಿ ಜೀವತುಂಬಿ ನಡೆದಾಡುವಂತೆ ಮಾಡಬಲ್ಲ ಸಮರ್ಥ ರಂಗ ನಿರ್ದೇಶಕರು. ಕಾವ್ಯದ ಮೂಲ ಸತ್ವ ಮತ್ತು ಕಾಲಮಾನದ ಪ್ರಸ್ತುತತೆಗಳನ್ನು ರೂಹುಗೆಡದಂತೆ ಕಂಡರಿಸಬಲ್ಲ ಕುಶಲಿಗಳು. ಮಾಯದ ಕುದುರೆ, ಅಪಕಾರಿಯ ಕಥೆ, ಆಷಾಢಭೂತಿ, ಭೀಷ್ಮ ಸೇನಾಧಿಪತ್ಯ, ಸಮಾಧಿ ಸತ್ವ, ಅದಲು ಬದಲು, ಕೇಶಪಾಶ ಪ್ರಪಂಚ, ಕರ್ಣದ್ಯುಮಣಿ, ಕರ್ಣ ರಸಾಯನ, ಉತ್ತರನ ಪೌರುಷ, ಹರಿಶ್ಚಂದ್ರ ಕಾವ್ಯ ಮುಂತಾದ ಪ್ರಯೋಗಗಳನ್ನು ನಿರ್ದೇಶಿಸಿದ್ದಾರೆ. ರಂಗಭೂಮಿಯ ಸಂಕೀರ್ಣ ಪ್ರಕಾರವಾದ ನಾಟಕದಲ್ಲಿ ವಾಚಿಕ ದುರ್ಬಲವಾಗುತ್ತಿರುವ ಸಂದರ್ಭದಲ್ಲಿ, ಕಣ್ಮರೆಯಾಗುತ್ತಿರುವ ಹಳಗನ್ನಡದ ಸತ್ವವನ್ನು ಪರಿಚಯಿಸಲು ವಾಚಿಕ ವಿನ್ಯಾಸವನ್ನು ಸಿದ್ಧಪಡಿಸಿದವರು. ಅಷ್ಟೇ ಅಲ್ಲದೆ ಕನ್ನಡ ರಂಗಭೂಮಿಯ ಸಮೃದ್ಧಿಗಾಗಿ ಹಳಗನ್ನಡದಲ್ಲೇ ಯಕ್ಷಗಾನ ತಾಳಮದ್ದಲೆಯ ಪ್ರಕಾರವನ್ನು ಪ್ರಾರಂಭಿಸುವ ಧೈರ್ಯ ತೋರಿಸಿದ್ದಾರೆ. ಪ್ರಸ್ತುತ ಕನ್ನಡ ರಂಗಭೂಮಿಯಲ್ಲಿ ಸಕ್ರಿಯರಾಗಿರುವ ಖ್ಯಾತ ನಿರ್ದೇಶಕರಲ್ಲೊಬ್ಬರಾಗಿ, ರಂಗಶಿಕ್ಷಣ ಶಾಲೆಗಳಿಗೆ ಅತಿಥಿ ಉಪನ್ಯಾಸಕರಾಗಿ ಕ್ರಿಯಾಶೀಲರಾಗಿದ್ದಾರೆ.

ಕೆ.ಜಿ. ಮಹಾಬಲೇಶ್ವರ