About the Author

ಲೇಖಕ ಕು.ಶಿ. ಹರಿದಾಸ ಭಟ್ಟರು ಮೂಲತಃ ಉಡುಪಿಯವರು. ಇವರು ಜನಿಸಿದ್ದು 1924 ಮಾರ್ಚ್‌ 17ರಂದು. ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಉಡುಪಿಯ ಎಂಜಿಎಂ (ಮಹಾತ್ಮಗಾಂಧಿ ಮೆಮೋರಿಯಲ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು. 

ಇಂಗ್ಲೆಂಡ್‌, ಅಮೆರಿಕಾ, ರಷ್ಯಾ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ಇವರು ಮೂರು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಘಂಟಮಾರಾ, ಅವ್ಯಕ್ತಮಾನವ, ನಡುಹಗಲಿನ ಕಗ್ಗತ್ತಲೆ, ಲೋಕಾಭಿರಾಮ(ಮೂರು ಸಂಪುಟಗಳು) ಇತಾಲಿಯ ನಾನು ಕಂಡಂತೆ. ಜಗದಗಲ, ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯ. ರಂಗಾಯಣ ಇವರ ಪ್ರಮುಖ ಕೃತಿಗಳು.

ಇವರಿಗೆ ರಾಜ್ಯ ಸರ್ಕಾರ ಪ್ರಶಸ್ತಿ, ಫಿನ್‌ಲೆಂಡ್‌ ಸರ್ಕಾರವು ಜಾನಪದ ಕಾರ್ಯ ಪ್ರಶಸ್ತಿಗಳು ಸಂದಿವೆ. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಯಕ್ಷಗಾನ ಕೇಂದ್ರ ಹಾಗೂ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2000 ಆಗಸ್ಟ್‌ 20ರಂದು ಹರಿದಾಸ ಭಟ್ಟರು ನಿಧನರಾದರು. 

ಕು.ಶಿ. ಹರಿದಾಸ ಭಟ್ಟ

(17 Mar 1924-20 Aug 2000)