ಲೋಕಾಭಿರಾಮ ಸಂಪುಟ-6

Author : ಕು.ಶಿ. ಹರಿದಾಸ ಭಟ್ಟ

Pages 282

₹ 150.00




Year of Publication: 1998
Published by: ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ
Address: ಉಡುಪಿ-576102

Synopsys

’ಲೋಕಾಭಿರಾಮ ಸಂಪುಟ-6’ ಹಿರಿಯ ಲೇಖಕ ಹರಿದಾಸ ಭಟ್ಟರ ಅಂಕಣ ಬರಹಗಳಾಗಿವೆ. ಕೃತಿಗೆ ಮುನ್ನುಡಿ ಬರೆದಿರುವ ಹಿರಿಯ ಸಾಹಿತಿ ಡಾ. ಬಿ. ದಾಮೋದರ ರಾವ್, ‘ಸುತ್ತುಮುತ್ತಲಿನ ಬದುಕನ್ನು ಶ್ರೀಮಂತಗೊಳಿಸಲು ಶ್ರಮಿಸಿದ ಎಲ್ಲರ ಬಗ್ಗೆಯೂ ಹರಿದಾಸ ಭಟ್ಟರಿಗೆ ಅಭಿಮಾನ. ಜಾತಿ, ಮತ, ಮಾಧ್ಯಮ- ಏನೇ ಇರಲಿ, ಸಾಧಕರನ್ನು ಸ್ಮರಿಸುವಾಗ ಅಂಕಣಗಳಲ್ಲಿ ಅಸೂಯೆ ಇರುವುದಿಲ್ಲ. ಸಲ್ಲುವ ಸಾಧನೆಗೆ ಬಿಚ್ಚು ಹೃದಯದ ಪ್ರಶಂಸೆ ವ್ಯಕ್ತವಾಗುತ್ತದೆ. ತುಳುವಿನ ಕೆಲಸವನ್ನು ಶ್ರದ್ಧೆಯಿಂದ ನಡೆಸಿಕೊಂಡು ದೇಶಾಂತರಗೈದ ಪಣಿಯಾಡಿ, ಸ್ವಭಾವಜನ್ಯ ಔದಾರ್ಯದಿಂದಾಗಿ ಸರ್ವಸ್ವವನ್ನೂ ಕಳೆದುಕೊಂಡು ತಾನೇ ಆಹುತಿಯಾದ ಆಗರ್ಭ ಶ್ರೀಮಂತ, ಆಪದ್ಭಾಂಧವ ಹಾಜಿ ಅಬ್ದುಲ್ಲ - ಇವರ ದುರಂತ ಕಥೆಗಳನ್ನು ಲೋಕಾಭಿರಾಮದಲ್ಲಿ ಓದಬೇಕು. ವ್ಯಕ್ತಿ ಚಿತ್ರಣದಲ್ಲಿ, ಘಟನೆಗಳನ್ನು ನಿರೂಪಿಸುವಾಗ ಭಟ್ಟರ ಬರವಣಿಗೆ ಬಹಳ ಪರಿಣಾಮಕಾರಿ. ಆರಿಸಿದ ವಸ್ತು ಯಾವುದೇ ಆಗಲಿ, ಬರವಣಿಗೆ ತನ್ನ ಮತ್ತು ಲೇಖಕನ ಸ್ವರೂಪವನ್ನು ಪರೋಕ್ಷವಾಗಿ ಬಯಲು ಮಾಡುತ್ತದೆ ಎಂಬ ಅಭಿಪ್ರಾಯಕ್ಕೆ ಸರಿಯಾಗಿ, ಅಂಕಣಗಳು ಉಲ್ಲೇಖಿಸುವ ಕಡೇಕಾರು ರಾಜಗೋಪಾಲರಾಯರಂತ ಹರಿದಾಸ ಭಟ್ಟರೂ ತಮ್ಮ ಸ್ವಗೃಹವನ್ನೆ ಅತಿಥಿ ಗೃಹವನ್ನಾಗಿ ಮಾಡಿ ಸಾಹಿತಿಗಳ ಸತ್ಸಂಗವನ್ನು ಅನುಭೋಗಿಸಿದವರು ಎನ್ನುವ ವಿಚಾರಗಳು ಈ ಕೃತಿಯಲ್ಲಿದೆ. ಮೂರು ದಶಕಗಳಷ್ಟು ಕಾಲ ಮುಂದುವರೆದು ಬಂದಿರುವ 'ಲೋಕಾಭಿರಾಮ'ದಲ್ಲಿ ವಸ್ತು, ವಿವರಗಳ ಆಯ್ಕೆಯಲ್ಲಿ ಪುನರುಕ್ತಿ ಆಗುವುದು ಅನಿವಾರ್ಯ. ಹಳತನ್ನು ಹಳಸದಂತೆ ನವೀಕರಿಸಿ ಪುನರುಕ್ತಿಗೆ ಹೊಸ ಕಳೆ ಬರುವಂತೆ ಮಾಡುವ ಚಾಕಚಕ್ಯತೆ ಈ ಲೇಖಕರಿಗೆ ಇದೆ. ಅಂಕಣ ಸಾಹಿತ್ಯಕ್ಕೆ ಮಾರಕವಾದ ಶ್ರೀಮದ್ಗಾಂಭೀರ್ಯ ಸೋಂಕದಂತಹ ಸ್ವಭಾವ ಸಹಜವಾದ ಚಿಂತನ ಶೈಲಿಯ ರಕ್ಷೆ ಇಲ್ಲಿದ್ದು, ಭಾವನಿರಪೇಕ್ಷವಲ್ಲದ, ಸಾಮಾನ್ಯವಾಗಿ ಭಾವಪರವಶವಾಗದ, ತನ್ನ ಒಲವು, ಆತಂಕಗಳನ್ನು ಸಂದರ್ಭಕ್ಕೆ ತಕ್ಕಂತ ಶ್ಲೇಷ, ಅಣಕ, ಉದ್ಧರಣ, ಉದ್ಧಾರ- ಇತ್ಯಾದಿ ಮೂಲಕ ಸ್ಪುಟಗೊಳಿಸುವ ಮೂರ್ತಚಿಂತನೆಯ ಒಂದು ಮಾದರಿ ಇಲ್ಲಿದೆ’ ಎಂದು ಪ್ರಶಂಸಿಸಿದ್ದಾರೆ. 

About the Author

ಕು.ಶಿ. ಹರಿದಾಸ ಭಟ್ಟ
(17 March 1924 - 20 August 2000)

ಲೇಖಕ ಕು.ಶಿ. ಹರಿದಾಸ ಭಟ್ಟರು ಮೂಲತಃ ಉಡುಪಿಯವರು. ಇವರು ಜನಿಸಿದ್ದು 1924 ಮಾರ್ಚ್‌ 17ರಂದು. ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಉಡುಪಿಯ ಎಂಜಿಎಂ (ಮಹಾತ್ಮಗಾಂಧಿ ಮೆಮೋರಿಯಲ್‌ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾದರು.  ಇಂಗ್ಲೆಂಡ್‌, ಅಮೆರಿಕಾ, ರಷ್ಯಾ ಮುಂತಾದ ರಾಷ್ಟ್ರಗಳಿಗೆ ಭೇಟಿ ನೀಡಿದ್ದ ಇವರು ಮೂರು ಪ್ರವಾಸ ಕಥನಗಳನ್ನು ಬರೆದಿದ್ದಾರೆ. ಘಂಟಮಾರಾ, ಅವ್ಯಕ್ತಮಾನವ, ನಡುಹಗಲಿನ ಕಗ್ಗತ್ತಲೆ, ಲೋಕಾಭಿರಾಮ(ಮೂರು ಸಂಪುಟಗಳು) ಇತಾಲಿಯ ನಾನು ಕಂಡಂತೆ. ಜಗದಗಲ, ಒಮ್ಮೆ ರಶಿಯಾ ಇನ್ನೊಮ್ಮೆ ಇತಾಲಿಯ. ರಂಗಾಯಣ ಇವರ ಪ್ರಮುಖ ಕೃತಿಗಳು. ಇವರಿಗೆ ...

READ MORE

Related Books