About the Author

ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು.  11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು.

ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ಬಹುಮಾನ, ಮಗುಮನಸ್ಸು ಕೃತಿಗೆ ಎಸ್.ಎಸ್.ಜಯರಾಂ ಪ್ರಶಸ್ತಿ, ಕಸಾಪದ ಅರಳು ಪ್ರಶಸ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಧನ ಪ್ರಶಸ್ತಿ, ಗುಲ್ಬರ್ಗಾದ ವರ್ಷದ ಉತ್ತಮ ಯುವ ಬರಹಗಾರ ಪ್ರಶಸ್ತಿ, ಮನಮನನ ಕೃತಿಗೆ ಕಸಾಪದ ಎಚ್.ಶಾರದಾರಾವ್ ದತ್ತಿನಿಧಿ ಪ್ರಶಸ್ತಿ, ಅರಳು ಪ್ರಶಸ್ತಿ. ಮಕ್ಕಳ ಮನೋವೈದ್ಯಕೀಯ ಸಾಹಿತ್ಯ ರಚನೆಗಾಗಿ ಯೂನಿಸೆಫ್ ಮೀಡಿಯಾ ಫೆಲೋಶಿಪ್, ಭರತನಾಟ್ಯ ಕಲಾವಿದೆ ಸಂಯೋಜಕಿಯಾಗಿ ರಾಷ್ಟ್ರೀಯ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ನೃತ್ಯರೂಪಕಗಳ ಪ್ರಸ್ತುತಿ. ಪಂದನಲ್ಲೂರು ಶೈಲಿಯ ಭರತನಾಟ್ಯ ಕಲಾವಿದೆ, ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯಿಂದ ಕನ್ನಡ ಎಂ.ಎ. ಪ್ರಥಮ ಬ್ಯಾಂಕ್. ಶ್ರೀವಿಜಯ ಕಲಾನಿಕೇತನ ಸ್ಥಾಪಿಸಿ ಕಲೆ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಸಂಶೋಧನೆ, ತರಬೇತಿ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ. ಇವರ ‘ಆತಂಕ ಮತ್ತು ಭಯಕ್ಕೆ ಸಂಬಂಧಿಸಿದ ಕಾಯಿಲೆಗಳು’ (ವಿಜ್ಞಾನ ಸಾಹಿತ್ಯ) ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ 2019ನೇ ಸಾಲಿನ ಅತ್ಯುತ್ತಮ ಕೃತಿ ಬಹುಮಾನ ಲಭಿಸಿದೆ. 

 

ಕೆ.ಎಸ್. ಪವಿತ್ರ

Awards