ಮನದಂಗಳದಲ್ಲಿ ಸಾಹಿತ್ಯಗಳು

Author : ಕೆ.ಎಸ್. ಪವಿತ್ರ

Pages 628

₹ 700.00




Year of Publication: 2022
Published by: ಸ್ನೇಹಾ ಎಂಟರ್ ಪ್ರೈಸಸ್
Address: #138, 2ನೇ ಮಹಡಿ, 7 ನೇ ’ ಸಿ’ ಮುಖ್ಯ ರಸ್ತೆ ಹಂಪಿನಗರ, ಬೆಂಗಳೂರು-560104
Phone: 9448870461

Synopsys

‘ಮನದಂಗಳದಲ್ಲಿ ಸಾಹಿತ್ಯದರಳು' ಒಂದು ವಿಶಿಷ್ಟ ಮತ್ತು ಅಪರೂಪದ ಪುಸ್ತಕ. ಇದನ್ನು ಸಂಪಾದಿಸಿದ, ಪ್ರಸ್ತುತ ಪಡಿಸಿದ ಲೇಖಕಿ, ಕಲಾವಿದ ಮತ್ತು ಮನೋವೈದ್ಯ ಕೆ.ಎಸ್. ಪವಿತ್ರರವರಂತಹವರು ಮಾತ್ರ ಇಂತಹದೊಂದು ಪುಸ್ತಕವನ್ನು ರೂಪಿಸಲು ಸಾಧ್ಯವೇನೋ. ಈ ಪುಸ್ತಕ ಹೊರಬಂದ ಸನ್ನಿವೇಶ ಮತ್ತು ಸಂದರ್ಭಗಳನ್ನು ಗಮನಿಸಿದಾಗ, ಈ ಹೇಳಕೆಯ ಮತ್ತು ಪುಸ್ತಕದ ವೈಶಿಷ್ಟ್ಯವು ಇನ್ನಷ್ಟು ಸ್ಪಷ್ಟವಾದೀತು. ಈ ಪುಸ್ತಕದ ಸಂಪಾದಕರ ತಂದೆ ಮತ್ತು ತಾಯಿಯವರ 50ನೆಯ ವಿವಾಹ ವಾರ್ಷಿಕೋತ್ಸವವಾದಾಗ, ಕರೋನಾ ಕಾಟ ಆದ್ದರಿಂದ ಅಂತಹ ಅಪರೂಪದ ಸಂದರ್ಭವನ್ನು ಆಚರಿಸುವ ಅವಕಾಶವಾಗಲಿಲ್ಲ. ಜತೆಗೆ, ತನಗಾಗಿ "ಅಭಿನಂದನ ಗ್ರಂಥವನ್ನು ಹೊರತರುವುದು ಬೇಡ ಎಂಬುದೇ ಆ ತಂದೆ-ತಾಯಿಯರ ಅಭಿಮತ.

About the Author

ಕೆ.ಎಸ್. ಪವಿತ್ರ

ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು.  11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...

READ MORE

Related Books