ಮನಸ್ಸಿಗೂ ಸೋಂಕು

Author : ಕೆ.ಎಸ್. ಪವಿತ್ರ

Pages 148

₹ 120.00




Year of Publication: 2020
Published by: ವಸಂತ ಪ್ರಕಾಶನ
Address: ನಂ.360, 10ನೇ ಬಿ.ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು- 560011
Phone: 080-22443996

Synopsys

‘ಮನಸ್ಸಿಗೂ ಸೋಂಕು’ ಸೋಂಕು ರೋಗಗಳು ಮತ್ತು ಮಾನಸಿಕ ಆರೋಗ್ಯ ಕುರಿತು  ಡಾ. ಕೆ.ಎಸ್. ಪವಿತ್ರ ಅವರ ಲೇಖನಗಳ ಸಂಕಲನ. ಈ ಕೃತಿಗೆ ಮುನ್ನುಡಿ ಬರೆದ ಕೃತಿಯ ಮುಖ್ಯ ಸಂಪಾದಕಿ ಹಾಗೂ ಲೇಖಿ ಡಾ. ವಸುಂಧರಾ ಭೂಪತಿ ‘ಕೋವಿಡ್ -19 ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದನ್ನು ಕಂಡಿದ್ದೇವೆ. ಅನುಭವಿಸಿದ್ದೇವೆ. ಜೀವ ಉಳಿಸಿಕೊಳ್ಳುವುದೇ ಮುಖ್ಯ ಗುರಿಯಾಗಿ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಿದ್ದೇ ಹೆಚ್ಚು ಕೋವಿಡ್ ನಿಂದಾಗಿ ಮಾನಸಿಕ ರೋಗಗಳು, ಆತ್ಮಹತ್ಯೆ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯಗಳು ಹೆಚ್ಚಾಗಿವೆ. ಆತಂಕ, ಖಿನ್ನತೆಗೆ ಮಕ್ಕಳೂ ಒಳಗಾಗಿರುವುದನ್ನು ನೋಡುತ್ತಿದ್ದೇವೆ. ನಾಲ್ಕು ಗೋಡೆಗಳ ಮಧ್ಯೆ ಬಂಧಿಯಾಗಿ ಸಮಯ ಕಳೆಯಲು ಟಿ.ವಿ. ಮೊಬೈಲ್ ವೀಕ್ಷಣೆ ಆರಂಭಿಸಿ ನಂತರ ಅದೇ ಒಂದು ಗೀಳಾಗಿ ಪರಿಣಮಿಸಿದೆ . ಜೊತೆಗೆ ಆನ್ ಲೈನ್ ತರಗತಿ, ಕಲಿಕೆಗೆ ಪ್ರೋತ್ಸಾಹ ನೀಡುವಂತಿದ್ದರೂ ತರಗತಿ ಹೊರತುಪಡಿಸಿದ ಸಮಯದಲ್ಲಿ ಮೊಬೈಲ್ ಬಳಕೆ ಚಟವಾಗುತ್ತಿರೋದು ಪೋಷಕರಿಗೆ ತಲೆಬಿಸಿ ಉಂಟುಮಾಡಿದೆ. ಈ ಎಲ್ಲಾ ವಿಚಾರಗಳನ್ನು ವಿಶ್ಲೇಷಿಸಿದಂತೆ ಮನಸ್ಸಿಗೂ ಸೋಂಕು ಕೃತಿಯಲ್ಲಿ ಲೇಖಕಿ ಪ್ಲೇಗ್ ನಿಂದ ಹಿಡಿದು ಕರೋನಾದಂತ ಸಾಂಕ್ರಾಮಿಕ ಕಾಯಿಲೆಗಳ ಇತಿಹಾಸ, ಕೈತೊಳೆಯುವಿಕೆ, ಮುಸುಕು ಧರಿಸುವುದರ ಮಹತ್ವದ ಬಗ್ಗೆ ತಿಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಲಾಕ್ ಡೌನ್, ಕ್ವಾರಂಟೈನ್ ಗಳು, ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ಮತ್ತು ನಕಾರಾತ್ಮಕ ಭಾವನೆಗಳನ್ನು ಹುಟ್ಟು ಹಾಕಿವೆ. ಟೆಲಿವೈದ್ಯಕೀಯ ಈ ಸಮಯದಲ್ಲಿ ಪಡೆದುಕೊಂಡಿರುವ ಮಹತ್ವದೊಂದಿಗೆ ಜನಸಮುದಾಯ ಹೇಗೆ ತನ್ನನ್ನು ತಾನು ಬದಲಾದ ಪರಿಸ್ಥಿತಿಗೆ ಹೊಂದಿಕೊಂಡು ಮನೋಧೈರ್ಯವನ್ನು ಕಳೆದುಕೊಳ್ಳದೇ ಜೀವನದ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳಬೇಕೆಂಬುದರ ಬಗ್ಗೆ ವಿವರವಾಗಿ ನಾಡಿನ ಹೆಸರಾಂತ ಮನೋವೈದ್ಯೆ, ಲೇಖಕಿ, ನೃತ್ಯ ಕಲಾವಿದೆ, ಡಾ.ಕೆ.ಎಸ್. ಪವಿತ್ರ ಅವರು ಮನಸ್ಸಿಗೂ ಸೋಂಕು ಕೃತಿಯಲ್ಲಿ ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದ್ದಾರೆ. .

About the Author

ಕೆ.ಎಸ್. ಪವಿತ್ರ

ವೈದ್ಯಕೀಯ ಸಾಹಿತ್ಯ ರಂಗ, ಭರತನಾಟ್ಯ ಕಲಾವಿದೆಯಾಗಿ ಹೆಸರು ಗಳಿಸಿರುವ ಪವಿತ್ರಾ ಕೆ.ಎಸ್ ಅವರು ಮೂಲತಃ ಶಿವಮೊಗ್ಗದವರು. ಆರೋಗ್ಯ ಸಲಹೆಗಳಿಂದ ಉನ್ನತ ಸ್ಥಾನ ಗಳಿಸಿರುವ ಅವರು ವಿಚಾರ ಸಾಹಿತ್ಯದಲ್ಲೂ ಆಸಕ್ತರು.  11ನೇ ವಯಸ್ಸಿನಲ್ಲಿ ಅಖಿಲ ಭಾರತ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದ ಉಪಾಧ್ಯಕ್ಷೆಯಾಗಿದ್ದ ಕೀರ್ತಿ ಅವರದು. ’ಮನ-ಮನನ, ನೀವು ಮತ್ತು ನಿಮ್ಮ ಸಂಬಂಧಗಳು, ಸಿ.ಜಿ.ಯೂಂಗ್, ಓ ಸಖಿ ನೀನು ಸಖಿಯೆ, ಪರಿಪೂರ್ಣ ವ್ಯಕ್ತಿತ್ವ ಇಂದಿನ ಮಹಿಳೆಯ ಮಾನಸಿಕ ಸವಾಲುಗಳು, ಗೀಳು ಖಾಯಿಲೆ, ಮಗು-ಮನಸು’ ಅವರ ಕೃತಿಗಳು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಬಹುಮಾನ, ಕಸಾಪ ಧರಣೇಂದ್ರಯ್ಯ ಮನೋವಿಜ್ಞಾನ ದತ್ತಿ ...

READ MORE

Related Books