About the Author

ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು 1961 ಡಿಸೆಂಬರ್ 5ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು.  ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮನಿರತರು. 

ಪ್ರಮುಖ ಕೃತಿಗಳು: ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ (ಕವನ), ಯಕ್ಷಗಾನ ಛಂದೋಗತಿ; ಯಕ್ಷಗಾನ ಛಂದಸ್ಸು; ಪಳಂತುಳುಕಾವ್ಯ (ಸಂಶೋಧನೆ) ಪುರಂದರ ದಾಸರ ಪದೊಕುಲು (ತುಳುವಿಗೆ) ಅನುವಾದ. ಯಕ್ಷಗಾನ ಸಾಹಿತ್ಯ ಚರಿತ್ರೆ.

ಇವರಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. 

ಕಬ್ಬಿನಾಲೆ ವಸಂತ ಭಾರದ್ವಾಜ್

(04 Dec 1961)