ಯಕ್ಷಗಾನ ಸಾಹಿತ್ಯ ಚರಿತ್ರೆ

Author : ಕಬ್ಬಿನಾಲೆ ವಸಂತ ಭಾರದ್ವಾಜ್

Pages 508

₹ 500.00




Year of Publication: 2020
Published by: ಯಜ್ಞಲಕ್ಷ್ಮಿ ಪ್ರಕಾಶನ
Address: ಶ್ರೀರಾಮಪುರ, ಮೈಸೂರು

Synopsys

ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಕೃತಿ-ಯಕ್ಷಗಾನ ಸಾಹಿತ್ಯ ಚರಿತ್ರೆ. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಕೃತಿಗೆ ಬೆನ್ನುಡಿ ಬರೆದು ‘ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಅವರ ಪ್ರಯತ್ನ ನನಗೆ ಯಾಕೆ ಇಷ್ಟವಾಯಿತು ಎಂದರೆ ಯಕ್ಷಗಾನ ಒಂದು ಸಮೂಹಕಲೆ. ಅದರ ಗೀತ, ಗದ್ಯಕಥನ ಒಂದು ಕಡೆಯಾದರೆ, ಮುಖವರ್ಣಿಕೆ, ನೃತ್ಯ, ಹಾಡುಗಾರಿಕೆ ಇನ್ನೊಂದು ಕಡೆ. ಎಲ್ಲವೂ ಒಂದೊಂದು ಕಡೆ ಪ್ರತ್ಯೇಕವಾಗಿ ಬೆಳವಣಿಗೆ ಕಂಡ ಕಲೆಗಳಾದರೆ, ಇವೆಲ್ಲ ನಿರ್ದಿಷ್ಟ ಪ್ರಮಾಣದಲ್ಲಿ ಸಂಯೋಗಗೊಂಡು ಆದ ಯಕ್ಷಗಾನ ಇನ್ನೊಂದು ಕಲೆ. ತಾಳಮದ್ದಲೆ, ಅರ್ಥಧಾರಿಗಳು ತಮಗೆ ಗೊತ್ತಿಲ್ಲದೇ ಮಾಡುವ ಸೃಜನಶೀಲವಾದ ಮತ್ತೊಂದು ಕಲೆ. ಇಷ್ಟು ಸಂಕೀರ್ಣವಾಗಿ ತನ್ನ ಅಂಗಾಂಗಗಳೆಲ್ಲ ಸ್ವತಂತ್ರ ಕಲೆಗಳಾಗಿರುವ ಇಂತಹ ಕಲೆಯನ್ನು ನಾನು ಪ್ರಪಂಚದಲ್ಲೇ ಕಂಡಿಲ್ಲ. ಇದನ್ನು ಆಳವಾಗಿ ಅಧ್ಯಯನ ಮಾಡಿ, ಅದರ ಸಾಹಿತ್ಯವನ್ನು ಪ್ರತ್ಯೇಕಿಸಿ, ಅದರ ಇತಿಹಾಸವನ್ನು ಬರೆದಿದ್ದು ಆಶ್ಚರ್ಯಕರ ಸಾಧನೆ. ಇಂತಹ ಸಾಧನೆ ಮಾಡಿದ ಕಬ್ಬಿನಾಲೆ ಅವರಿಗೆ ಕೃತಜ್ಞ’ ಎಂದು ಪ್ರಶಂಸಿಸಿದ್ದಾರೆ. 

 

About the Author

ಕಬ್ಬಿನಾಲೆ ವಸಂತ ಭಾರದ್ವಾಜ್
(04 December 1961)

ಸಾಹಿತಿ, ಸಂಶೋಧಕ ಕಬ್ಬಿನಾಲೆ ವಸಂತ ಭಾರದ್ವಾಜ್ ಅವರು 1961 ಡಿಸೆಂಬರ್ 5ರಂದು ಉಡುಪಿ ಜಿಲ್ಲೆ ಕಾರ್ಕಳ ತಾಲ್ಲೂಕಿನ ಕಬ್ಬಿನಾಲೆಯಲ್ಲಿ ಜನಿಸಿದರು.  ವೃತ್ತಿಯಲ್ಲಿ ಬ್ಯಾಂಕ್ ಉದ್ಯೋಗಿ. ಸಾಹಿತ್ಯ ರಚನೆ ಹಾಗೂ ಅಷ್ಟಾವಧಾನ ಕಾರ್ಯಕ್ರಮನಿರತರು.  ಪ್ರಮುಖ ಕೃತಿಗಳು: ನುಡಿಸು ಬಾ ಇಂಚರವ, ಮತ್ತೆ ಬರಲಿ ಭಾವಗೀತೆ (ಕವನ), ಯಕ್ಷಗಾನ ಛಂದೋಗತಿ; ಯಕ್ಷಗಾನ ಛಂದಸ್ಸು; ಪಳಂತುಳುಕಾವ್ಯ (ಸಂಶೋಧನೆ) ಪುರಂದರ ದಾಸರ ಪದೊಕುಲು (ತುಳುವಿಗೆ) ಅನುವಾದ. ಯಕ್ಷಗಾನ ಸಾಹಿತ್ಯ ಚರಿತ್ರೆ. ಇವರಿಗೆ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಬಹುಮಾನ, ಆರ್ಯಭಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  ...

READ MORE

Related Books