About the Author

ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣ ಅವರ (ಪದವಿ ಅಧ್ಯಯನ) ಸಹಪಾಠಿಗಳಾಗಿದ್ದ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು 1883ರ ಮಾರ್ಚ್ 23 ರಂದು ಮಂಜೇಶ್ವರದಲ್ಲಿ ಜನಿಸಿದರು. ರಾಜ್ಯ ಪುನರ್‌ ವಿಂಗಡಣೆಯಾದಾಗ ಕಾಸರಗೋಡು ಕೇರಳದ ಪಾಲಾಯಿತು. ತೀವ್ರ ಹಳಹಳಿಸಿದ ಪೈಗಳು ತಮ್ಮ ಹೆಸರಿನೊಂದಿಗೆ ಸದಾ ಮಂಜೇಶ್ವರ ಎಂದು ‘ಎಂ’ ಸೇರಿಸಿಕೊಂಡರು. ಪಂಜೆ ಮಂಗೇಶರಾಯರು ಇವರ ಗುರುಗಳು.  

ತಂದೆ ಮಂಗಳೂರಿನ ಸಾವುಕಾರ ತಿಮ್ಮಪ್ಪ ಹಾಗೂ ತಾಯಿ ದೇವಕಿಯಮ್ಮ. ಮಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಬಿ.ಎ ಪದವಿ ಶಿಕ್ಷಣಕ್ಕಾಗಿ ( 1903-1906) ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ. ಆದರೆ, ತಂದೆ ತೀರಿ ಹೋಗಿದ್ದು,ಮಧ್ಯೆದಲ್ಲೇ ಓದು ಅಪೂರ್ಣವಾಗಿಸಿ ಮಂಜೇಶ್ವರಕ್ಕೆ ಹಿಂತಿರುಗಿದರು. 

ಆದರೆ, ಅವರು ಇಂಗ್ಲಿಷ್, ಲ್ಯಾಟಿನ್, ಫ್ರೆಂಚ್, ಬಂಗಾಲಿ, ಸಂಸ್ಕೃತ, ಪಾಳಿ, ಮರಾಠಿ, ಜರ್ಮನ್ ಸೇರಿದಂತೆ ಒಟ್ಟು 25 ಭಾಷೆ ಕಲಿತಿದ್ದರು. ಮೈಸೂರು ವಿ.ವಿ. ಇವರಿಗೆ ನೀಡಬೇಕೆಂದಿರುವ ಗೌರವ ಡಾಕ್ಟರೇಟ್ ನ್ನು ಅವರು ನಯವಾಗಿ ತಿರಸ್ಕರಿಸಿದರು.

ಕೃತಿಗಳು: ಗೊಲೋಥಾ ಅಥವಾ ಯೇಸುವಿನ ಕಡೆಯ ದಿನ, ವೈಶಾಖಿ ಅಥವಾ ಬುದ್ಧನ ಕೊನೆಯ ದಿನ (ಖಂಡ ಕಾವ್ಯ), ಇಂಡಿಯಾನ, ವಿಟಂಕ, ಇಂಗಡಲು (ಆಯ್ದ ಕವನಗಳು), ತಾಯಿ ಮತ್ತು ನೋ ನಾಟಕಗಳು: ಕುಮಸಾಕಾ ಸೇರಿದಂತೆ ಇತರೆ ನಾಟಕಗಳು, ಗಿಳಿವಿಂಡು (ಕವನ ಸಂಕಲನ), ಗೀತಾಂಜಲಿ (ರವೀಂದ್ರನಾಥ ಠಾಗೋರರ ಗೀತಾಂಜಲಿಯ ಕನ್ನಡ ಅನುವಾದ), ಗೋವಿಂದ ಪೈ ಅವರ ಲೇಖನಗಳು ಮತ್ತು ಪ್ರಬಂಧಗಳು, ಗೋವಿಂದ ಪೈ ಅವರ ಕೆಲವು ಪತ್ರಗಳು, ಗೋವಿಂದ ಪೈ ಸಂಶೋಧನಾ ಸಂಪುಟ, ನಂದಾದೀಪ (ಕವನ ಸಂಕಲನ), ಹೃದಯರಂಗ (ಕವನ ಸಂಕಲನ) ಪ್ರಕಟಗೊಂಡಿವೆ. 

ಪುರಸ್ಕಾರಗಳು: ಕನ್ನಡದ ಪ್ರಥಮ ರಾಷ್ಟ್ರಕವಿ, 1949 ರಲ್ಲಿ ಮದರಾಸು ಸರಕಾರವು (1956ರಲ್ಲಿ ಕರ್ನಾಟಕ ಏಕೀಕರಣಕ್ಕಿಂತ ಮೊದಲು ದಕ್ಷಿಣ ಕನ್ನಡ ಜಿಲ್ಲೆಯು ಆಗಿನ ಮದರಾಸು ರಾಜ್ಯದಲ್ಲಿ ಅಂದರೆ ಈಗಿನ ತಮಿಳುನಾಡಿನಲ್ಲಿದ್ದಿತು) ಗೋವಿಂದ ಪೈಗಳಿಗೆ ರಾಷ್ಟ್ರ ಕವಿ ಎಂದು ಸನ್ಮಾನ ನೀಡಿ ಗೌರವಿಸಿತು. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- 1950ರಲ್ಲಿ ಮುಂಬೈಯಲ್ಲಿ ಜರುಗಿದ 34ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈಗಳು ಅಧ್ಯಕ್ಷರಾಗಿದ್ದರು. 1963ರ ಸೆಪ್ಟೆಂಬರ್ 06 ರಂದು ನಿಧನರಾದರು.

ಎಂ. ಗೋವಿಂದ ಪೈ

(23 Mar 1883-16 Sep 1963)

BY THE AUTHOR