ಶ್ರೀ ಪಂಜೆಯವರ ನೆನಪಿಗಾಗಿ

Author : ಎಂ. ಗೋವಿಂದ ಪೈ

Pages 366

₹ 8.00




Year of Publication: 1952
Published by: ಪಂಜೆ ಸ್ಮಾರಕ ಗ್ರಂಥ ಸಮಿತಿ
Address: ಪುತ್ತೂರು -(ದ.ಕ)

Synopsys

ಪಂಜೆ ಮಂಗೇಶರಾಯರು ಮರಣ ಹೊಂದಿದ 14 ವರುಷಗಳ ತರುವಾಯ ಅವರ ನೆನಪಿನಲ್ಲಿ ಸಾಕಾರಗೊಂಡಿದ್ದೇ ಈ ಕೃತಿ-ಪಂಜೆಯವರ ನೆನೆಪಿಗಾಗಿ. ರಾಷ್ಟ್ರಕವಿ ಎಂ. ಗೋವಿಂದ ಪೈ, ವಿ.ಸೀತಾರಾಮಯ್ಯ ಹಾಗೂ ಶಿವರಾಮ ಕಾರಂತ ಅವರ ಸಂಪಾದಕತ್ವದಡಿ ಕೃತಿ ಪ್ರಕಟಗೊಂಡಿದೆ.

ಇಡೀ ಗ್ರಂಥವನ್ನು ಮೂರು ಪ್ರಮುಖ ವಿಭಾಗಗಳಾಗಿ ವಿಂಗಡಿಸಿದ್ದು, ಮೊದಲನೆಯದಾಗಿ ಪಂಜೆ ಅವರು ಕುಟುಂಬದ ಸದಸ್ಯರು, ಸಂಬಂಧಿಕರು, ಮಿತ್ರರು ಬರೆದ ಮಾತುಗಳು, ಎರಡನೆಯದರಲ್ಲಿ ಸ್ವತಃ ಪಂಜೆ ಅವರೇ ಬರೆದ ಲೇಖನಗಳು, ವಿವಿಧ ಪ್ರತಿಕೆಗಳಲ್ಲಿ ಪ್ರಕಟಿತ ಲೇಖನಗಳು, ಮೂರನೆಯದರಲ್ಲಿ- ನಾಡಿನ ವಿವಿಧೆಡೆಯಿಂದ ಅಭಿಮಾನಿ ಸಾಹಿತ್ಯಾಸಕ್ತರು ಬರೆದ ಲೇಖನಗಳು ಇವೆ. ಪಂಜೆ ಅವರ ಹಾಗೂ ಅವರ ಸಂಬಂಧಿರೊಂದಿಗೆ ಇರುವ ವಿರಳ ಭಾವಚಿತ್ರಗಳು, ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಮಾಡಿದ ಭಾಷಣ ಹೀಗೆ ಎಲ್ಲವನ್ನೂ ಈ ಕೃತಿ ಒಳಗೊಂಡಿದೆ.

About the Author

ಎಂ. ಗೋವಿಂದ ಪೈ
(23 March 1883 - 16 September 1963)

ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣ ಅವರ (ಪದವಿ ಅಧ್ಯಯನ) ಸಹಪಾಠಿಗಳಾಗಿದ್ದ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು 1883ರ ಮಾರ್ಚ್ 23 ರಂದು ಮಂಜೇಶ್ವರದಲ್ಲಿ ಜನಿಸಿದರು. ರಾಜ್ಯ ಪುನರ್‌ ವಿಂಗಡಣೆಯಾದಾಗ ಕಾಸರಗೋಡು ಕೇರಳದ ಪಾಲಾಯಿತು. ತೀವ್ರ ಹಳಹಳಿಸಿದ ಪೈಗಳು ತಮ್ಮ ಹೆಸರಿನೊಂದಿಗೆ ಸದಾ ಮಂಜೇಶ್ವರ ಎಂದು ‘ಎಂ’ ಸೇರಿಸಿಕೊಂಡರು. ಪಂಜೆ ಮಂಗೇಶರಾಯರು ಇವರ ಗುರುಗಳು.   ತಂದೆ ಮಂಗಳೂರಿನ ಸಾವುಕಾರ ತಿಮ್ಮಪ್ಪ ಹಾಗೂ ತಾಯಿ ದೇವಕಿಯಮ್ಮ. ಮಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಬಿ.ಎ ಪದವಿ ಶಿಕ್ಷಣಕ್ಕಾಗಿ ( 1903-1906) ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ. ಆದರೆ, ತಂದೆ ತೀರಿ ಹೋಗಿದ್ದು,ಮಧ್ಯೆದಲ್ಲೇ ಓದು ಅಪೂರ್ಣವಾಗಿಸಿ ಮಂಜೇಶ್ವರಕ್ಕೆ ಹಿಂತಿರುಗಿದರು.  ಆದರೆ, ಅವರು ...

READ MORE

Related Books