ಮೂರು ಉಪನ್ಯಾಸಗಳು

Author : ಎಂ. ಗೋವಿಂದ ಪೈ

Pages 163

₹ 1.00




Year of Publication: 1940
Published by: ಆರ್.ಎಸ್. ಪಂಚಮುಖಿ
Address: ನಿರ್ದೇಶಕರು, ಕನ್ನಡ ಸಂಶೋಧನಾ ಮಂಡಳಿ, ಧಾರವಾಡ

Synopsys

ಕನ್ನಡ ಸಂಶೋಧನಾ ಸಮಿತಿಯ ಆಹ್ವಾನದ ಮೇರೆಗೆ ಹಳೆಗನ್ನಡ ಸಾಹಿತ್ಯ ಸಂಶೋಧನಾತ್ಮಕತೆ ಕುರಿತು ಮಾತನಾಡಲು ಧಾರವಾಡಕ್ಕೆ ಆಗಮಿಸಿದ್ದ ಎಂ. ಗೋವಿಂದ ಪೈ ಅವರ ಉಪನ್ಯಾಸಗಳನ್ನು ಪ್ರಕಟಿಸಿದ ಕೃತಿ ಇದು. ಮೊದಲನೇ ಉಪನ್ಯಾಸವು ರನ್ನನ ಪರಶುರಾಮ ಚರಿತದ ಹಾಗೂ ಚಕ್ರೇಶ್ವರ ಚರಿತದ ಕಥೆ ಕುರಿತು ಜಿಜ್ಞಾಸೆ, ಎರಡನೆಯದರಲ್ಲಿ-ಬಸವಣ್ಣನ ಕಾಲ ನಿರ್ಣಯ; ಕನ್ನಡ ಸಾಹಿತ್ಯದಲ್ಲಿ ವಚನ ಕಾವ್ಯದ ಹೊಸ ಹಾದಿ ಹಾಗೂ ಶರಣರ ಬರವಣಿಗೆಗೂ ತಕ್ಕಂತೆ ಹೆದ್ದಾರಿ ನಿರ್ಮಿಸಿದಾತ ಎಂಬ ಕಾರಣಕ್ಕೆ ಕನ್ನಡ ಸಾಹಿತ್ಯದಲ್ಲಿ ಬಸವಣ್ಣನಿಗೆ ಉನ್ನತ ಸ್ಥಾನ ಹಾಗೂ ಮೂರನೇ ಉಪನ್ಯಾಸದಲ್ಲಿ ಕನ್ನಡ ಸಾಹಿತ್ಯದ ಪ್ರಾಚೀನ ನೆಲೆಯನ್ನು ಕ್ರಿ.ಶ. 3ನೇ ಶತಮಾನದವರೆಗೂ ಶೋಧಿಸಿದೆ. ಈ ಮೂರು ಉಪನ್ಯಾಸಗಳು ವಿದ್ವತ್ ಪೂರ್ಣವಾಗಿದ್ದು, ಸಂಶೋಧನೆಗೆ ಉತ್ತಮ ಆಕರಗಳಾಗಿವೆ.

About the Author

ಎಂ. ಗೋವಿಂದ ಪೈ
(23 March 1883 - 16 September 1963)

ರಾಷ್ಟ್ರಪತಿ ಡಾ. ಎಸ್. ರಾಧಾಕೃಷ್ಣ ಅವರ (ಪದವಿ ಅಧ್ಯಯನ) ಸಹಪಾಠಿಗಳಾಗಿದ್ದ ರಾಷ್ಟ್ರಕವಿ ಎಂ. ಗೋವಿಂದ ಪೈ ಅವರು 1883ರ ಮಾರ್ಚ್ 23 ರಂದು ಮಂಜೇಶ್ವರದಲ್ಲಿ ಜನಿಸಿದರು. ರಾಜ್ಯ ಪುನರ್‌ ವಿಂಗಡಣೆಯಾದಾಗ ಕಾಸರಗೋಡು ಕೇರಳದ ಪಾಲಾಯಿತು. ತೀವ್ರ ಹಳಹಳಿಸಿದ ಪೈಗಳು ತಮ್ಮ ಹೆಸರಿನೊಂದಿಗೆ ಸದಾ ಮಂಜೇಶ್ವರ ಎಂದು ‘ಎಂ’ ಸೇರಿಸಿಕೊಂಡರು. ಪಂಜೆ ಮಂಗೇಶರಾಯರು ಇವರ ಗುರುಗಳು.   ತಂದೆ ಮಂಗಳೂರಿನ ಸಾವುಕಾರ ತಿಮ್ಮಪ್ಪ ಹಾಗೂ ತಾಯಿ ದೇವಕಿಯಮ್ಮ. ಮಂಗಳೂರಿನಲ್ಲಿ ಪ್ರಾಥಮಿಕ ಶಿಕ್ಷಣದ ನಂತರ, ಬಿ.ಎ ಪದವಿ ಶಿಕ್ಷಣಕ್ಕಾಗಿ ( 1903-1906) ಮದ್ರಾಸಿನ ಕ್ರಿಶ್ಚಿಯನ್ ಕಾಲೇಜಿನಲ್ಲಿ ವ್ಯಾಸಂಗ. ಆದರೆ, ತಂದೆ ತೀರಿ ಹೋಗಿದ್ದು,ಮಧ್ಯೆದಲ್ಲೇ ಓದು ಅಪೂರ್ಣವಾಗಿಸಿ ಮಂಜೇಶ್ವರಕ್ಕೆ ಹಿಂತಿರುಗಿದರು.  ಆದರೆ, ಅವರು ...

READ MORE

Related Books