About the Author

ಪರಿಸರ ಮತ್ತು ಇಕಾಲಜಿ ಬಗ್ಗೆ ಅಪಾರ ಕಾಳಜಿ ಇರುವ ಲೇಖಕ. ಹದಿನೈದಕ್ಕೂ ಕೃತಿಗಳನ್ನು ರಚಿಸಿದ್ದಾರೆ. ‘ಋತ’ ಎಂಬ ದ್ವೈಮಾಸಿಕ ಕೂಡ ಅವರ ಸಂಪಾದಕತ್ವದಲ್ಲಿ ಬರುತ್ತಿದ್ದು, ಈಗಾಗಲೇ ಹಲವಾರು ವಿಚಾರಗಳ ಕುರಿತು ಸಂಚಿಕೆಗಳು ಬಂದಿವೆ. ಅಕ್ಷರ ಪ್ರಕಾಶನದಿಂದ ಪ್ರಕಟವಾಗಿರುವ ಜಾಗತಿಕ ಪರಿಸರ ಚರಿತ್ರೆ, ಹಂಪಿ ವಿಶ್ವವಿದ್ಯಾಲಯ ಹೊರತಂದಿರುವ ಬತ್ತದ ಚಿಲುಮೆ, ಪಶ್ಚಿಮ ಘಟ್ಟಗಳ ಕಥೆ ಹೇಳುವ ವೈವಿಧ್ಯದ ತೊಟ್ಟಿಲು ಸೇರಿದಂತೆ 16 ಕೃತಿಗಳನ್ನು ಮಾಧವ ಐತಾಳ್ ಬರೆದಿದ್ದಾರೆ.

ಮಾಧವ ಐತಾಳ್