About the Author

ಮಾಧುರಿ ದೇಶಪಾಂಡೆ ಕಾವ್ಯನಾಮ (ಮಾಧುರಿ) ಮೂಲತಃ ಬೆಂಗಳೂರಿನವರು. 8ನೇ ತರಗತಿಯಿಂದ ಬರೆಯುವ ಹವ್ಯಾಸ, ವೃತ್ತಿ ಅನುವಾದ ಮತ್ತು ಬರವಣಿಗೆ ಪ್ರವೃತ್ತಿಯಾಗಿದೆ. ಸಂವಿಧಾನದ ಕರಡು ಪ್ರತಿಯ ಚರ್ಚೆಯ ಸಮಯದ ಆಂಗ್ಲ ಅವತರಣಿಕೆಯನ್ನು ಇಂಗ್ಲೀಷ್‌ನಿಂದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಸಲುವಾಗಿ ಅನುವಾದಿಸಿರುವುದು. ಧರ್ಮಪಾಲ್ series ನ ಬ್ರಿಟಿಷ್ ಒರಿಜಿನ್ ಆಫ್ ಕೌ ಸ್ಲಟರ್ಸ್ ನಲ್ಲಿ ಹಲವು ಪುಟಗಳನ್ನು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕೆ ಅನುವಾದಿಸಿದ್ದಾರೆ. ಇಂಗ್ಲೀಷ್‌ ನಿಂದ ಕನ್ನಡಕ್ಕೆ, ಹಿಂದಿಯಿಂದ ಕನ್ನಡಕ್ಕೆ, ಇಂಗ್ಲೀಷ್‌ನಿಂದ ಹಿಂದಿಗೆ ಹೀಗೆ ಎಲ್ಲ ಭಾಷೆಗಳಿಂದ ಅನುವಾದಿಸಿದ್ದಾರೆ.

ಕೃತಿಗಳು: ಮಾತೃತ್ವ ಮತ್ತು ಇತರ ಕಥೆಗಳು (ಕಥಾ ಸಂಕಲನ), ಪರಿವರ್ತನೆ ಮತ್ತು ಇತರ ಕಥೆಗಳು (ಕಥಾ ಸಂಕಲನ), ಕಥಾರಂಜಿನಿ (ಕಥಾ ಸಂಕಲನ), ಕವನ ಝರಿ (ಕವನ ಸಂಕಲನ), ಪ್ರೇಮ (ಅನುವಾದಿತ ಕಾದಂಬರಿ), ಚಂದ್ರ ಗುಪ್ತ (ಅನುವಾದಿತ ನಾಟಕ - ಮೂಲ ಜಯಶಂಕರ ಪ್ರಸಾದ್), ಬಾಂಧವ್ಯ (ಕಾದಂಬರಿ), ಮಕ್ಕಳಿಗಾಗಿ ಸುವಿಚಾರ (ಸಣ್ಣ ಸಣ್ಣ ಸುವಿಚಾರಗಳ ಸಂಗ್ರಹ )

ಪ್ರಶಸ್ತಿಗಳು: 2012 ನೇ ಸಾಲಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಅರಳು ಪ್ರಶಸ್ತಿ , 2020 ಸಾಲಿನ ಬುದ್ಧ ಬಸವ ಗಾಂಧಿ ಪ್ರತಿಷ್ಟಾನದ ದತ್ತಿ ಪ್ರಶಸ್ತಿ, 2023ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ವತಿಯಿಂದ ಮಹಿಳಾ ಸಾಧಕಿ ಪ್ರಶಸ್ತಿಗಳು ದೊರೆತಿವೆ.

ಮಾಧುರಿ ದೇಶಪಾಂಡೆ