ಪ್ರೇಮ ಎಂದರೆ ಬರಿಯ ಹರೆಯದಲ್ಲಿ ಹುಟ್ಟಿ ಅಲ್ಪ ಕಾಲದಲ್ಲೇ ಸಾಯುವುದಲ್ಲ ಎನ್ನುತ್ತಲೇ ಅದಕ್ಕೊಂದು ಹೊಸ ವ್ಯಾಖ್ಯಾನವನ್ನು ನೀಡಿರುವ ಕಾದಂಬರಿ ‘ಪ್ರೇಮ’. ಕತಾ ನಾಯಕ ಮತ್ತು ಕತಾ ನಾಯಕಿಯರ ಪಾತ್ರಗಳ ನಿರ್ಧಾರ, ಗಟ್ಟಿತನ ಓದುಗರನ್ನು ಮನಸೂರೆಗೊಳ್ಳುವುದು ಮಾತ್ರವಲ್ಲ ರಂಜಿಸುತ್ತವೆ. ಪ್ರೇಮವು ಕೇವಲ ಎರಡು ವ್ಯಕ್ತಿಗೆ ಸಂಬಂಧಿಸಿದ್ದು ಮಾತ್ರವಲ್ಲ ಏಕೆಂಬುದನ್ನು ಕಾದಂಬರಿಯಲ್ಲೇ ಸ್ಪಷ್ಟತೆ ಇದೆ.
ತೆಲುಗಿನ ಖ್ಯಾತ ಲೇಖಕ, ಕಾದಂಬರಿಕಾರ ಯಂಡಮೂರಿ ವೀರೇಂದ್ರನಾಥ್ ಅವರ ಬಹುತೇಕ ಕೃತಿಗಳು ಕನ್ನಡದಲ್ಲೂ ಅನುವಾದಗೊಂಡು ಜನಪ್ರಿಯವಾಗಿವೆ. ಇವರ ಕೃತಿಗಳನ್ನು ವಂಶಿ, ಸರಿತಾ ಜ್ಞಾನಾನಂದ, ಬೇಲೂರು ರಾಮಮೂರ್ತಿ, ರವಿ ಬೆಳಗೆರೆ, ಯತಿರಾಜ್ ವೀರಾಂಬುದಿ ಮುಂತಾದವರು ಕನ್ನಡಕ್ಕೆ ಅನುವಾದಿಸಿದ್ದಾರೆ. ...
READ MORE