
'ಚಂದ್ರಗುಪ್ತ ನಾಟಕ’ ಮಾಧುರಿ ದೇಶಪಾಂಡೆ ಅವರ ಅನುವಾದಿತ ನಾಟಕವಾಗಿದೆ. ಹಿಂದಿ ಸಾಹಿತ್ಯದಲ್ಲಿ ನಾಟಕ ವಿಭಾಗದಲ್ಲಿ ಅತ್ಯುನ್ನತ ಸ್ಥಾನವನ್ನೂ ವಿಶೇಷವಾದ ಕೀರ್ತಿಯನ್ನು ಗಳಿಸಿರುವ ಮಹಾನುಭಾವರು, ಶ್ರೀ ಜಯಶಂಕರ ಪ್ರಸಾದರು. ಇವರು ನಾಟಕ, ಕಾವ್ಯ, ಸಣ್ಣ ಕಥೆಗಳ ಕ್ಷೇತ್ರಗಳಲ್ಲಿ ಅದ್ಭುತವಾದ ಯಶಸ್ಸನ್ನು ಪಡೆದವರು. ಇವರು ಹಿಂದಿಯ ಛಾಯಾವಾದಿ (ರಮ್ಯವಾದ) ಕಾವ್ಯದ ಒಂದು ಸ್ತಂಭ ಎಂಬ ಬಿರುದನ್ನು ಗಳಿಸಿದ ಶ್ರೇಷ್ಠಕವಿ. ಇವರ 'ಚಂದ್ರಗುಪ್ತ' ನಾಟಕವು ನಾಟಕ ಸಾಹಿತ್ಯಕ್ಕೆ ಕಿರೀಟ ಪ್ರಾಯವಾದುದು ಎಂದರೆ ತಪ್ಪಾಗಲಾರದು. ನಾಟಕದ ಸರ್ವ ಲಕ್ಷಣಗಳನ್ನೂ ಹೊಂದಿ ಪಾತ್ರಗಳನ್ನು ಉತ್ತುಂಗಕ್ಕೆ ಕೊಂಡೊಯ್ದಿರುವ ಅತ್ಯುನ್ನತ ಪ್ರತಿಭೆಯನ್ನು ಪ್ರಸಾದರು ಸೂಸಿದ್ದಾರೆ. ಇಂತಹ ಸುಂದರ ನಾಟಕವನ್ನು ಶ್ರೀಮತಿ ಮಾಧುರಿ ದೇಶಪಾಂಡೆಯವರು ಕನ್ನಡಕ್ಕೆ ತಂದಿದ್ದಾರೆ. ಇವರು ಹಿಂದಿ ಎಂ. ಎ ಪದವೀಧರರಾಗಿದ್ದು ಕನ್ನಡದಲ್ಲಿಯೂ ಒಳ್ಳೆಯ ಪರಿಶ್ರಮವನ್ನು ಹೊಂದಿದ್ದಾರೆ.
©2025 Book Brahma Private Limited.