About the Author

ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಹಗಾರರಾದ  ಮಲ್ಲಿಕಾರ್ಜುನ ಕಡಕೋಳ ಅವರು ಜನಿಸಿದ್ದು 1956 ಅಕ್ಟೋಬರ್‌ 2ರಂದು. ಹುಟ್ಟೂರು ಗುಲ್ಬರ್ಗ ಜಿಲ್ಲೆಯ ಕಡಕೋಳ. ತಂದೆ ಸಾಧು, ತಾಯಿ ನಿಂಗಮ್ಮ. ಹುಟ್ಟೂರು, ಯಡ್ರಾಮಿ ಹಾಗೂ ಗುಲ್ಬರ್ಗದಲ್ಲಿ ಶಿಕ್ಷಣ ಪಡೆದ ಇವರು ಆರೋಗ್ಯ ಇಲಾಖೆಯಲ್ಲಿ ಬೋದಕರಾಗಿ, ಹಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. 

ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ, ದಾವಣಗೆರೆ ಮಹಾನಗರಪಾಲಿಕೆ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೈವಾರ ನಾರಾಯಣ ತಾತ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.  ಕರ್ನಾಟಕ ನಾಟಕ ಅಕಾಡೆಮಿ ಸದಸ್ಯರಾಗಿ, ಕರ್ನಾಟಕ ರಂಗ ಸಮಾಜ ನಿಕಟಪೂರ್ವ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. 

ಇವರ ಪ್ರಮುಖ ಕೃತಿಗಳೆಂದರೆ ಫಲ್ಗುಣಿಯಲಿ ಕೇಳಿಬಂದ ರುದ್ರವೀಣೆ (ವೈಚಾರಿಕ ಲೇಖನಗಳು), ಅವಳ ಸನ್ನಿಧಿಯಲಿ...(ಅಂಕಣ ಬರಹ), ರಂಗ ಸುನೇರಿ (ವಿಮರ್ಶಾ ಸಂಕಲನ), ದ್ರುಪದ (ಶಾಸ್ತ್ರೀಯ ಸಂಗೀತ ಕೃತಿ), ಕಡಕೋಳ ಮಡಿವಾಳಪ್ಪನವರ ತತ್ವಜ್ಞಾನ ಪದಗಳು (ಸಂಪಾದಿತ ಕೃತಿಗಳು), ಜೀವನ್ಮುಖಿ (ಸಂ: ಅಭಿನಂದನ ಗ್ರಂಥ), ರಂಗ ವಿಹಂಗಮ, ದಾವಣಗೆರೆ ಜಿಲ್ಲೆ ರಂಗಭೂಮಿ, ಕಂಚಿಕೇರಿ ಶಿವಣ್ಣ, ರಂಗ ಬಾಸಿಂಗ, ರಂಗ ಕಂಕಣ ( ಸಂಪಾದಿತ ಕೃತಿ ), ರಂಗ ಮಲ್ಲಿಗೆ, ಲಾಸ್ಟ್ ಬೆಲ್ (ಮಾನವಿಕ ಕೃತಿ), ತೆನೆ ತೇರು, ಕಾಯಕ, ನೌಕರ ಬಂಧು, ಸಂವೇದನೆ, ಯಡ್ರಾಮಿ ಸೀಮೆ ಕಥನಗಳು (ಆಯ್ದ ಅಂಕಣ ಬರಹಗಳು) ಮುಂತಾದವು.  

 

 

ಮಲ್ಲಿಕಾರ್ಜುನ ಕಡಕೋಳ

Awards