ಕಡಕೋಳ ನೆಲದ ನೆನಪುಗಳು

Author : ಮಲ್ಲಿಕಾರ್ಜುನ ಕಡಕೋಳ

Pages 144

₹ 150.00




Year of Publication: 2022
Published by: ಶ್ರೀ ವೀರೇಶ್ವರ ಪ್ರಕಾಶನ
Address: ಶ್ರೀಕಡಕೋಳ ಮಡಿವಾಳೇಶ್ವರ ಮಹಾಮಠ, ಸುಕ್ಷೇತ್ರ:ಕಡಕೋಳ, ತಾ:ಯಡ್ರಾಮಿ, ಜಿ:ಕಲಬುರ್ಗಿ

Synopsys

‘ಕಡಕೋಳ ನೆಲದ ನೆನಪುಗಳು’ ರಂಗಕರ್ಮಿ, ಲೇಖಕ ಮಲ್ಲಿಕಾರ್ಜುನ ಕಡಕೋಳ ಹಾಗೂ ಇತರರ ಬರಹಗಳ ಸಂಕಲನ. ಈ ಕೃತಿಗೆ ಲೇಖಕ ಶ್ರೀಶೈಲ ನಾಗರಾಳ ಅವರು ಮುನ್ನುಡಿ ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಕಡಕೋಳ ನೆಲದ ನೆನಪುಗಳು’ ಈ ಹೆಸರಲ್ಲೇ ನೆಲಧರ್ಮದ ಸಂವೇದನೆಗಳಿವೆ. ತಮ್ಮ ಸಂವೇದನಾಶೀಲ ಚಿಂತನ ಬರೆಹಗಳಿಂದ ಮಲ್ಲಿಕಾರ್ಜುನ ಕಡಕೋಳ ನಾಡಿಗೆ ಪರಿಚಿತರು ಎಂದಿದ್ದಾರೆ. ಜೊತೆಗೆ ಮಲ್ಲಿಕಾರ್ಜುನ ಕಡಕೋಳರು ಕಲ್ಯಾಣ ಕರ್ನಾಟಕದ ಬಿಸಿಲ ನೆಲದ ಯಡ್ರಾಮಿ ಸೀಮೆಯ ಅಪ್ಪಣ ದೇಸಿ ಪ್ರತಿಭೆ. ಬಡತನ ಭವಣೆಗಳ ಅಗ್ನಿಯನ್ನು ತುಳಿದುಕೊಂಡೇ ಸ್ವಯಂಭೂ ಪರಿಶ್ರಮದಿಂದ ಬೆಳೆದು ತಮ್ಮೊಳಗಿನ ಹಣತೆಯಲ್ಲಿ. ತಮ್ಮ ವ್ಯಕ್ತಿತ್ವ ರೂಪಿಸಿಕೊಂಡು ಬರಹ ಬೆಳಗಿಸಿಕೊಂಡರೆಂದರೆ ತಪ್ಪಾಗಲಿಕ್ಕಿಲ್ಲ. ಈ ಹಣತೆಗೆ ತೈಲವಾಗಿದ್ದು ಮಾತ್ರ ನಿಜವಾದ ಮಾನವತಾವಾದಿ ಅಪ್ಪಟ ಬಂಡಾಯ ಪ್ರಜ್ಞೆಯ ಕವಿ, ತತ್ವ ಪದಕಾರ ಕಡಕೋಳ ಮಡಿವಾಳಪ್ಪನು. ಬತ್ತಿಯಾದದ್ದು ಕಡಕೋಳ ಜನಪದವನ್ನಲೇಬೇಕು. ಪ್ರಸ್ತುತ ಪುಸ್ತಕದ ಆರಂಭದ ಮಡಿವಾಳಪ್ಪನ ತತ್ವದದ ಒಂದು ನುಡಿಯನ್ನು ಉಲ್ಲೇಖಿಸಿ ಹೇಳುತ್ತಾರೆ. ಕಷ್ಟಪಟ್ಟು ಕಡಕೋಳಕ್ಕೆ ಹೋದರ ಕಡಿಮೇನವ್ವ ಅಲ್ಲಿ ತೊಡಕೇನವ್ವ ಮೃಡ ಮಹಾಂತೇಶನ ಪಾದವ ಹಿಡಿಬೇಕವ್ವ ಅಲ್ಲಿ ದುಡಿಬೇಕವ್ವ. ಬದುಕು ಕಟುವಾದರೂ ಮಧುರವಾದುದೂ ಹೌದು. ಇದನ್ನು ವ್ಯಾಖ್ಯಾನಿಸುವುದೇ ಕಾವ್ಯ. ಆದರೆ ಇದು ಅಷ್ಟು ಸರಳವಲ್ಲ. ಕರುಳಿನ ಸಂಬಂಧದಂತೆ ತೊಡಕಿನದು. ಸಂಕೀರ್ಣವಾದುದು. ಈ ಸಂಬಂಧಗಳ ಸಾವಯವೀಕರಣವೇ ಅನುಭಾವ ಜಗತ್ತು. ಆ ಅನುಭಾವ ಜಗತ್ತಿನ ಸೊಲ್ಲೇ ತತ್ವಪದ. ಈ ತತ್ವ ಜಗತ್ತಿನ ತನಿಹಾಲನ್ನು ಸಾಮಾಜಿಕ ಸಂಕಷ್ಟಗಳ ಬುತ್ತಿ ಉಂಡು ಬೆಳೆದವರು ಮಲ್ಲಿಕಾರ್ಜುನ ಕಡಕೋಳರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ ಮತ್ತು ಗುಲಬರ್ಗಾ ವಿ.ವಿ.ಯ ಅತ್ಯುತ್ತಮ ಪುಸ್ತಕ ಪ್ರಶಸ್ತಿ ಪಡೆದ ಅವರ ಯಡ್ರಾಮಿ ಸೀಮೆ ಕಥನಗಳು ಜೀವನಾನುಭವಗಳ ಹೊತ್ತಿಗೆ. ಕನ್ನಡದ ಅತ್ಯಂತ ಮಹತ್ವದ ಕೃತಿ ಸಾಲಿನಲ್ಲಿ ನಿಲ್ಲುವಂತಹ ಅರ್ಹತೆಯುಳ್ಳದ್ದಾಗಿದೆ. ಒಂದರ್ಥದಲ್ಲಿ ಕುವೆಂಪು ಅವರ ಮಲೆನಾಡಿನ ಚಿತ್ರಗಳು. ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳಿಗೆ ಸರಿಗಡಿಯಾಗಬಲ್ಲದು ಎಂದರೆ ಅತಿಶಯೋಕ್ತಿ ಆಗಲಾರದು ಎಂದಿದ್ದಾರೆ ಶ್ರೀಶೈಲ ನಾಗರಾಳ. ಕೃತಿಯಲ್ಲಿ ಲೇಖನಗಳನ್ನು ಎರಡು ಭಾಗಗಳಲ್ಲಿ ದಾಖಲಿಸಲಾಗಿದ್ದು ಭಾಗ 1ರಲ್ಲಿ ಮಲ್ಲಿಕಾರ್ಜುನ ಕಡಕೋಳರ ಬರಹಗಳು ಶೀರ್ಷಿಕೆಯಡಿ ಕಡಕೋಳ ನೆಲದ ನೆನಪುಗಳು, ಶ್ರೀವೀರೇಶ್ವರ ದೇವರು ಬಂದರು,ಮಠ ಮಾತ್ರವಲ್ಲ ಊರಿನ ಚಿತ್ರವೇ ಬದಲಾಯಿತು, ಮಡಿವಾಳಪ್ಪನೆಂಬ ಲೋಕದ ಬೆಳಕು, ಮರೆತ ಹೆಜ್ಜೆ ಗುರುತುಗಳ ಗುಲ್ದಾಸ್ಥ, ಕಡಕೋಳ ಜಾತ್ರೆಯ ಕಜ್ಜಭಜ್ಜಿ, ಏಕತಾರಿಯ ಘಮಲು, ತತ್ವಪದ: ಸಹೃದಯದ ಸುದೀಪ್ತ ಸಂಬಂಧ, ಕಳೆದು ಹೋದ ಊರಿನ ಹಳೆಯ ಕಥನ ಲೇಖನಗಳು ಸಂಕಲನಗೊಂಡಿವೆ ಭಾಗ 2ರಲ್ಲಿ ಸಂಪಾದಿತ ಬರಹಗಳು ಶೀರ್ಷಿಕೆಯಡಿಯಲ್ಲಿ ಎ.ಕೆ. ರಾಮೇಶ್ವರ ಅವರ ಪುಣ್ಯಕ್ಷೇತ್ರ, ಪಾವನ ತೀರ್ಥ ಕಡಕೋಳ, ಡಾ.ಕಲ್ಯಾಣರಾವ ಜಿ.ಪಾಟೀಲರ ಕಡಕೋಳ ಮಡಿವಾಳಪ್ಪ, ಡಾ.ಶ್ರೀಶೈಲ ನಾಗರಾಳ ಅವರ ಕಡಕೋಳ ಮಡಿವಾಳಪ್ಪನ ತತ್ವಪದಗಳು, ಡಾ.ವಿಜಯಶ್ರೀ ಸಬರದ ಅವರ ಕಡಕೋಳ ಮಡಿವಾಳಪ್ಪ ಹಾಗೂ ಶಿಶುನಾಳ ಶರೀಫರ ಪದಗಳಲ್ಲಿ ಅನುಭಾವ, ಪ್ರಕಾಶ ದೊರೆ ಮುಡಬೂಳರ ಮೂಡಬೂಳಕ್ಕೆ ಬಂದ ಸೂರ್ಯ, ಪ್ರಹ್ಲಾದ ವಾ. ಪತ್ತಾರ ಯಡ್ರಾಮಿ ಅವರ ನಾ ಕಡಕೋಳದ ಗುಲಾಮ, ಅಶೋಕರಾವ ಕುಲಕರ್ಣಿ ಮಲ್ಲಾಬಾದಿ ಅವರ ಶ್ರೀಗಳೊಂದಿಗಿನ ಅಮೃತ ಗಳಿಗೆಗಳು, ಮಲ್ಲಿನಾಥ ಮಾಸ್ತಕ ನೆಲ್ಲಿಗಿ ವಾಕ್ ಸಿದ್ಧಿಯ ವೀರಯ್ಯ ಅಪ್ಪ, ಶೈಲಜಾ ಬಿ.ಪಾಟೀಲ ಕೋರವಾರ, ಮಲ್ಲಿಕಾರ್ಜುನ ಎಸ್.ಆಲಮೇಲರ ದಾಸೋಹದ ಮಹಾಮಠ, ಅಸ್ಮಿತಾ ಅವರ ಗ್ರಂಥ ದಾಸೋಯಿಗಳ ಕುರಿತು, ಬಿದನೂರು ಗಂಗಮ್ಮನವರ ಮಡಿವಾಳಪ್ಪನ ತಾಯಿ ಆಶು ಕವಯಿತ್ರಿ ಬಿದನೂರು ಗಂಗಮ್ಮ ತಾಯಿಯ ತತ್ವಪದ ಲೇಖನಗಳು ಸಂಕಲನಗೊಂಡಿವೆ. ಭಾಗ 3ರಲ್ಲಿ ಶ್ರೀಮಠಕ್ಕೆ ಸಂಬಂಧಿಸಿದ ಫೋಟೋಗಳನ್ನು ನೀಡಲಾಗಿದೆ.

About the Author

ಮಲ್ಲಿಕಾರ್ಜುನ ಕಡಕೋಳ

ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಹಗಾರರಾದ  ಮಲ್ಲಿಕಾರ್ಜುನ ಕಡಕೋಳ ಅವರು ಜನಿಸಿದ್ದು 1956 ಅಕ್ಟೋಬರ್‌ 2ರಂದು. ಹುಟ್ಟೂರು ಗುಲ್ಬರ್ಗ ಜಿಲ್ಲೆಯ ಕಡಕೋಳ. ತಂದೆ ಸಾಧು, ತಾಯಿ ನಿಂಗಮ್ಮ. ಹುಟ್ಟೂರು, ಯಡ್ರಾಮಿ ಹಾಗೂ ಗುಲ್ಬರ್ಗದಲ್ಲಿ ಶಿಕ್ಷಣ ಪಡೆದ ಇವರು ಆರೋಗ್ಯ ಇಲಾಖೆಯಲ್ಲಿ ಬೋದಕರಾಗಿ, ಹಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.  ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ, ದಾವಣಗೆರೆ ಮಹಾನಗರಪಾಲಿಕೆ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೈವಾರ ನಾರಾಯಣ ತಾತ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.  ಕರ್ನಾಟಕ ನಾಟಕ ಅಕಾಡೆಮಿ ...

READ MORE

Related Books