ಪರಿಮಳದ ಹಾದಿಯ ಪಯಣಿಗರು

Author : ಮಲ್ಲಿಕಾರ್ಜುನ ಕಡಕೋಳ

Pages 232

₹ 250.00




Year of Publication: 2023
Published by: ಅಭಿವ್ಯಕ್ತಿ
Address: ವಿಜಯನಗರ ಜಿಲ್ಲೆ, ಹರಪನಹಳ್ಳಿ ತಾಲ್ಲೂಕು, ಶಾಂತಿನಗರ, ಅಂಚೆ:ಕಡತಿ-583137

Synopsys

‘ಪರಿಮಳದ ಹಾದಿಯ ಪಯಣಿಗರು’ ಮಲ್ಲಿಕಾರ್ಜುನ ಕಡಕೋಳ ಅವರು ಬರೆದಿರುವ ಸಾಂಸ್ಕೃತಿಕ ವ್ಯಕ್ತಿ ಚಿತ್ರಗಳ ಆಯ್ದ ಅಂಕಣ ಬರಹಗಳು. ಕೃತಿಗೆ ಲಕ್ಷ್ಮೀಪತಿ ಕೋಲಾರ ಅವರ ಮುನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ಗೆಳೆಯ ಮಲ್ಲಿಕಾರ್ಜುನ ಕಡಕೋಳರು ನಮ್ಮ ಸಂದರ್ಭದ ಮುಖ್ಯ ಲೇಖಕರಷ್ಟೇ ಅಲ್ಲದೆ, ಬಾಲ್ಯ ಸಹಜ ಕುತೂಹಲ ಹಾಗೂ ಪ್ರೌಢಾವಸ್ಥೆಯ ಸೂಕ್ಷ್ಮತೆಗಳೆರಡೂ ಹದವಾಗಿ ಬೆರೆತ ಅಪರೂಪದ ಬರಹಗಾರರು, ಅವರ ಬರವಣಿಗೆಯ ಮುಖ್ಯ ಶಕ್ತಿಯೇ ರಾಜಿಗೆಡೆಯಿಲ್ಲದ ಪ್ರಾಮಾಣಿಕತೆ ಮತ್ತು ಘನತೆ. ಅವರ ಮಾತುಗಳ ಆಳದಲ್ಲಿ ಮಾನವೀಯ ಅಂತಃಕರಣದ ಸಲಿಲಧಾರೆಯ ಜಲಜಲ ಸದ್ದು ಕೂಡ ಆಲಿಸುವಂತಾಗಿ ಓದು ಆಪ್ಯಾಯಮಾನ ಎನಿಸುತ್ತದೆ. ಮನುಷ್ಯ ತನ್ನ ಇತಿಹಾಸದಲ್ಲಿ ಅಗಾಧ ಪ್ರಮಾಣದಲ್ಲಿ ಸೃಷ್ಟಿಸಿದ್ದು ನಿರರ್ಥಕವಾದ ಕಸದ ಗುಡ್ಡೆಗಳನ್ನೇ! ಈ ನೆಲದ ತಲೆಯಿಂದಲಂತೂ ಎಂದೆಂದಿಗೂ ಖಾಲಿಯಾಗದೇನೋ ಎಂಬಂತೆ ಅಮರಿಕೊಂಡಿರುವ ವ್ಯರ್ಥ ಕಸವನ್ನು ಶುದ್ಧ ಮನಸ್ಸಿನಿಂದ ಪಕ್ಕಕ್ಕೆ ತಳ್ಳಿ, ಕಡಕೋಳ ಮಡಿವಾಳಪ್ಪನ ಎಚ್ಚರದ ತಾತ್ವಿಕ ಕಣ್ಣುಗಳೊಂದಿಗೆ ತನ್ನಾಧ್ಯತೆಯ ಬದುಕಿನ ಶ್ರೇಷ್ಠ ಮೌಲ್ಯಗಳನ್ನೇ ಪದೇ ಪದೇ ಹೆಕ್ಕಿ ಹೆಕ್ಕಿ ಓದುಗರೆದುರಿಗೆ ಮಂಡಿಸುವ ಇವರ ಜೀವ ಪ್ರೀತಿಯ ಬದ್ಧತೆ ಎದೆ ತೋಯಿಸುವಂಥದ್ದು. ವಚನ, ತತ್ವಪದ ಹಾಗೂ ಜಾನಪದದ ಮೂಲ ಪರಂಪರೆಗಳೆಲ್ಲವೂ ತಲೆಯಲ್ಲಿ ಸಂಚಯಗೊಂಡ ಕಸವನ್ನು ಬಳಿದು ಹಾಕುವ ಧೀಮಂತ, ಇಹದ ನಿರ್ವಾಣಕ್ಕೆ ಹತ್ತಿರವಾಗುತ್ತಾನೆಂದು ಪದೇ ಪದೇ ಹೇಳುತ್ತ ಬಂದದ್ದು ಕೂಡ ಈ ಹಿನ್ನೆಲೆಯಲ್ಲಿಯೇ. ಈ ಮಾತಿಗೆ ಲೇಖಕ ಮಲ್ಲಿಕಾರ್ಜುನ ಕಡಕೋಳರಷ್ಟೇ ಅಲ್ಲದೆ, ಇಲ್ಲಿನ ಬಹುತೇಕ ವ್ಯಕ್ತಿತ್ವಗಳು ಕೂಡ ಉತ್ತಮ ಮಾದರಿಯ ನಿದರ್ಶನಗಳಾಗಿ ಕಂಡುಬರುತ್ತಾರೆ. ಈ ಕಾರಣದಿಂದಾಗಿಯೇ ಈ ಕೃತಿಗೆ ತನ್ನಿಂತಾನೇ ಜೀವಮೌಲ್ಯವೊಂದು ಪ್ರಾಪ್ತಿಯಾಗಿಬಿಟ್ಟಿದೆ. ಕೃತಿಯೊಂದು ಶ್ರೇಷ್ಠವಾಗಲು ಇನ್ನೇನು ಬೇಕಿದೆ? ಹಾಗಾಗಿ ಈ ಕೃತಿಗೆ ತಾಂತ್ರಿಕ ಮೌಲ್ಯಮಾಪನದ ಅಗತ್ಯವಿರಬಹುದೇ ಹೊರತು ತಾತ್ವಿಕವಾದದ್ದಲ್ಲ ಎಂದಿದ್ದಾರೆ.

About the Author

ಮಲ್ಲಿಕಾರ್ಜುನ ಕಡಕೋಳ

ರಂಗಭೂಮಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬರಹಗಾರರಾದ  ಮಲ್ಲಿಕಾರ್ಜುನ ಕಡಕೋಳ ಅವರು ಜನಿಸಿದ್ದು 1956 ಅಕ್ಟೋಬರ್‌ 2ರಂದು. ಹುಟ್ಟೂರು ಗುಲ್ಬರ್ಗ ಜಿಲ್ಲೆಯ ಕಡಕೋಳ. ತಂದೆ ಸಾಧು, ತಾಯಿ ನಿಂಗಮ್ಮ. ಹುಟ್ಟೂರು, ಯಡ್ರಾಮಿ ಹಾಗೂ ಗುಲ್ಬರ್ಗದಲ್ಲಿ ಶಿಕ್ಷಣ ಪಡೆದ ಇವರು ಆರೋಗ್ಯ ಇಲಾಖೆಯಲ್ಲಿ ಬೋದಕರಾಗಿ, ಹಿರಿಯ ಆರೋಗ್ಯ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ.  ಸಾಹಿತ್ಯ ಹಾಗೂ ರಂಗಭೂಮಿ ಕ್ಷೇತ್ರಕ್ಕೆ ಇವರು ನೀಡಿದ ಕೊಡುಗೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿ ರಾಜ್ಯ ಪ್ರಶಸ್ತಿ, ದಾವಣಗೆರೆ ಮಹಾನಗರಪಾಲಿಕೆ  ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕೈವಾರ ನಾರಾಯಣ ತಾತ ಪ್ರಶಸ್ತಿ ಮುಂತಾದ ಹಲವಾರು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.  ಕರ್ನಾಟಕ ನಾಟಕ ಅಕಾಡೆಮಿ ...

READ MORE

Related Books