About the Author

ಕವಿ ಮಾರ್ಕಂಡಪುರಂ ಶ್ರೀನಿವಾಸ ಅವರು 1948 ಡಿಸೆಂಬರ್ 10ರಂದು ಕೋಲಾರ ಜಿಲ್ಲೆ ಮಾರ್ಕಂಡಪುರಂದಲ್ಲಿ ಜನಿಸಿದರು. ತಾಯಿ ನಾರಾಯಣಮ್ಮ, ತಂದೆ ವೆಂಕಟರಮಣಪ್ಪ. ತೆಲುಗು-ಕನ್ನಡ ದ್ವಿಭಾಷಾ ಕವಿ. ವೃತ್ತಿಯಲ್ಲಿ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯಾಗಿದ್ದ ಇವರು ಪ್ರವೃತ್ತಿಯಲ್ಲಿ ಸೃಜನಶೀಲ ಸಾಹಿತಿಯಾಗಿ ಹೆಸರಾದವರು. 

ಇವರು ಬರೆದ ಪ್ರಮುಖ ಕೃತಿಗಳೆಂದರೆ ಇಣುಕುನೋಟ, ಆದಿ ಅಂತ್ಯಗಳ ನಡುವೆ, ಕತ್ತಲು ಬೆಳಕುಗಳಾಚೆ, ಬದುಕು ಚಿತ್ತಾರ, ನಮ್ಮನಮ್ಮಲ್ಲಿ ಮಾತ್ರ, ನಿಗೂಢ (ಕವನ ಸಂಕಲನಗಳು); ಹೊಸಮುಖ ತೊಟ್ಟುಕೊ, ವಿಶ್ವಂಭರ ಜ್ವಾಲೆಗಳು ಮತ್ತು ಮಹಾ ಸಮನ್ವಯ, ಮಹಾಪ್ರಸ್ಥಾನ, ಅಮೀನ (ಅನುವಾದಗಳು); ಜ್ಞಾನಪೀಠ ಪ್ರಶಸ್ತಿ ವಿಜೇತರು- ಸಿ. ನಾರಾಯಣರೆಡ್ಡಿ ಬದುಕು-ಬರಹ, ಮಹಾಕವಿ ಶ್ರೀಶ್ರೀರವರು, ತೆಲುಗಿನಲ್ಲೂ ಕೃತಿ ರಚಿಸಿದ್ದಾರೆ. ನದಿತೊಪ್ರವಹಿಂಚಿನಷ್ಟಾಮಿ(ಡಾ. ಪಿ.ಎಸ್. ರಾಮಾನುಜಂ ಅವರ ನದಿಯೊಡನೆ ಕೃತಿಯ ಅನುವಾದ) ಮುಂತಾದ ಕೃತಿಗಳನ್ನು ರಚಿಸಿದ್ದಾರೆ. 

ಮಾರ್ಕಂಡಪುರಂ ಶ್ರೀನಿವಾಸ

(10 Dec 1948)