About the Author

ಮಕ್ಕಳ ಕತೆ, ಕವನ, ನಾಟಕ ರಚನೆಯಲ್ಲಿ ಹೆಸರಾಗಿರುವ ಮತ್ತೂರು ಸುಬ್ಬಣ್ಣ ಎಂತಲೇ ಪರಿಚಿತರಾಗಿರುವವರು ಹೊಸಹಳ್ಳಿ ಬಾಲಸುಬ್ರಹ್ಮಣ್ಯ. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ಮಕ್ಕಳ ಕತೆ ಹೇಳುವುದರಲ್ಲಿಯೂ ಸಿದ್ಧರು.

ಮಾಡಿದ್ದುಣ್ಣೋ ಮಾಮಣ್ಣ, ಒಂದು ಕುರಿಯ ಕತೆ, ಅಂಶು ಮತ್ತು ರಾಬೊಟ್‌, ಸಮಯಪ್ರಜ್ಞೆ, ಕಾಡಿನ ಕತೆಗಳು, ಕುಮಾ ಮತ್ತು ಇತರ ಮಕ್ಕಳ ಕತೆಗಳು, ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ, ವಿಚಿತ್ರ ಸಲಹೆ, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ ಭಾಗ-1, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ-೧,  ಹಣ್ಣಿನ ಕಳ್ಳ ಮತ್ತಿತರ ನಾಟಕಗಳು, ಅಂಶು ಅನು ಮತ್ತು ರೋಬೊ, ಅಮಿತ ಪ್ರಭಾವ, ನಮ್ಮ ಸೂರ್ಯ ಮೇಷ್ಟ್ರು, ಆ ೩೬ ದಿನಗಳು ಸೇರಿದಂತೆ ಒಟ್ಟು 16 ಕೃತಿಗಳನ್ನು ರಚಿಸಿದ್ದಾರೆ. Amshu, anu and the Robo ಇಂಗ್ಲಿಷ್‌ಗೆ ಸುಬ್ಬಣ್ಣ ಅವರು ಅನುವಾದಿಸಿರುವ ಕೃತಿ ಇದಾಗಿದೆ.  ಇವರಿಗೆ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಸಂದಿವೆ. 

ಮತ್ತೂರು ಸುಬ್ಬಣ್ಣ