ನಮ್ಮ ಸೂರ್ಯ ಮೇಷ್ಟ್ರು

Author : ಮತ್ತೂರು ಸುಬ್ಬಣ್ಣ

Pages 224

₹ 0.00




Year of Publication: 2018
Published by: ಎಮ್ಮೆನ್ನೆಸ್ ಕುಟುಂಬ ಮತ್ತು ಸ್ನೇಹ ಬಳಗ
Address: ಮತ್ತೂರು, ಶಿವಮೊಗ್ಗ.

Synopsys

ನಮ್ಮ ಸೂರ್ಯ ಮೇಸ್ಟ್ರು-ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿದ್ದ ಎಂ.ಎನ್. ಸೂರ್ಯನಾರಾಯಣ ಅವರ ಬದುಕು, ಅವರೊಂದಿಗಿನ ಒಡನಾಟದ ಕುರಿತು ಶಿಷ್ಯರು, ಅಭಿಮಾನಿಗಳು ಬರೆದ ಲೇಖನಗಳ ಸಂಕಲನ (ಸ್ಮರಣಿಕೆ). ಡಾ.ಎಂ.ಎನ್. ನಂದಕುಮಾರ ಮತ್ತು ಮತ್ತೂರು ಸುಬ್ಬಣ್ಣ ಕೃತಿಯನ್ನು ಸಂಪಾದಿಸಿದ್ದಾರೆ. ಆಂತರಿಕ ಪ್ರಸಾರಕ್ಕಾಗಿ ಕೃತಿಯನ್ನು ಪ್ರಕಟಿಸಿದ್ದು, ಬೆಲೆ ನಮೂದಿಸಿಲ್ಲ. ಎಂ.ಎನ್. ಸೂರ್ಯನಾರಾಯಣರ ಶಿಕ್ಷಕ ವೃತ್ತಿ, ಬೋಧನಾ ಕಲೆ, ವ್ಯಕ್ತಿತ್ವದ ಪ್ರಭಾವ ಇತ್ಯಾದಿ ಅಂಶಗಳ ಮೇಲೆ ಬೆಳಕು ಚೆಲ್ಲುವ ಲೇಖನಗಳು ಈ ಕೃತಿಯ ಅರ್ಥವಂತಿಕೆಯನ್ನು ಹೆಚ್ಚಿಸಿವೆ. 

About the Author

ಮತ್ತೂರು ಸುಬ್ಬಣ್ಣ

ಮಕ್ಕಳ ಕತೆ, ಕವನ, ನಾಟಕ ರಚನೆಯಲ್ಲಿ ಹೆಸರಾಗಿರುವ ಮತ್ತೂರು ಸುಬ್ಬಣ್ಣ ಎಂತಲೇ ಪರಿಚಿತರಾಗಿರುವವರು ಹೊಸಹಳ್ಳಿ ಬಾಲಸುಬ್ರಹ್ಮಣ್ಯ. ಕೇಂದ್ರೀಯ ವಿದ್ಯಾಲಯದಲ್ಲಿ ಶಿಕ್ಷಕರಾಗಿ ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಇವರು ಮಕ್ಕಳ ಕತೆ ಹೇಳುವುದರಲ್ಲಿಯೂ ಸಿದ್ಧರು. ಮಾಡಿದ್ದುಣ್ಣೋ ಮಾಮಣ್ಣ, ಒಂದು ಕುರಿಯ ಕತೆ, ಅಂಶು ಮತ್ತು ರಾಬೊಟ್‌, ಸಮಯಪ್ರಜ್ಞೆ, ಕಾಡಿನ ಕತೆಗಳು, ಕುಮಾ ಮತ್ತು ಇತರ ಮಕ್ಕಳ ಕತೆಗಳು, ತಮ್ಮಣ್ಣ ಮತ್ತು ಇರುವೆ ರಾಜಕುಮಾರಿ, ವಿಚಿತ್ರ ಸಲಹೆ, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ ಭಾಗ-1, ಒಂದು ಕುರಿಯ ಕತೆ, ಮಕ್ಕಳ ಕಥಾಲೋಕ-೧,  ಹಣ್ಣಿನ ಕಳ್ಳ ...

READ MORE

Related Books