About the Author

ಲೇಖಕ ನಂದೀಶ ಹಂಚೆ ಅವರು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಎಂ.ಎ ಪೂರ್ಣಗೊಳಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ’ ವಿಷಯದಡಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದರು. 

ಕೃತಿಗಳು: ಕೆಂಡದೊಳಗಿನ ಬೇರು(ವಿಮರ್ಶೆ), ದುಡಿ (ವಿಮರ್ಶೆ), ಅಲ್ಲಮ ಮತ್ತು ಅರಾಜಕತೆ (ವಿಮರ್ಶೆ), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ(ಮಹಾಪ್ರಬಂಧ), ಬಸವಣ್ಣ ಮತ್ತು(ಸಂಪಾದಿತ), ಎಚ್.ಎಂ. ಚನ್ನಯ್ಯ ಸಮಗ್ರ ಸಾಹಿತ್ಯ, ಬಸವಪ್ಪಶಾಸ್ತ್ರಿಗಳ ಸಮಗ್ರ ನಾಟಕ ಸಾಹಿತ್ಯ(ಸಂಪಾದಿತ), ಕುವೆಂಪು ಕಥೆಗಳ ಸಮೀಕ್ಷೆ (ವಿಮರ್ಶೆ), ಘನ-ಮನ(ಸಂಪಾದಿತ, ರಾಜೇಂದ್ರ ಶ್ರೀವಾಣಿ(ಸಂಪಾದಿತ) ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ನಾಡಿನ ಹಲವು ಪತ್ರಿಕೆಗಳಲ್ಲಿ ಅವರ ಲೇಖನ, ಕಥೆ, ಪ್ರಕಟವಾಗಿವೆ. ಸದ್ಯ  ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ನಂದೀಶ್ ಹಂಚೆ

(10 Feb 1978)