ಪುಸ್ತಕ ಲೋಕ, ಸಂಚಿಕೆ-3

Author : ನಂದೀಶ್ ಹಂಚೆ

Pages 100




Year of Publication: 2020
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಬೆಂಗಳೂರು-560002
Phone: 08022484516

Synopsys

‘ಪುಸ್ತಕಲೋಕ’ (ಸಂಪುಟ-8, ಸಂಚಿಕೆ-3) ಕೃತಿಯು ಎಂ.ಎನ್.ನಂದೀಶ್ ಹಂಚೆ ಅವರ ಪ್ರಧಾನ ಸಂಪಾದನೆಯಲ್ಲಿ ಬಂದಿರುವ ತ್ರೈಮಾಸಿಕವಿದು.  ಎ.ವಿ. ನಾವಡ ಈ ಕೃತಿಯ ಸಂಪಾದಕರು. ವಿವಿಧ ಲೇಖನಗಳ ಸಂಕಲನವಾಗಿದೆ. ಕೃತಿಯಲ್ಲಿ ಕೆಲವು ಅಧ್ಯಾಯಗಳು ಹೀಗಿವೆ : ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರೊಂದಿಗೆ ಮಾತು (ಟಿ. ಎನ್. ವಾಸುದೇವಮೂರ್ತಿ), ಕನ್ನಡ ಇ- ಪುಸ್ತಕಗಳ ಹೊಸ ಲೋಕ (ದೇವು ಪತ್ತಾರ), ಕನ್ನಡದ ಕಾಯಕಜೀವಿ ಕುಲಪತಿ ಎಚ್.ಜೆ.ಲಕ್ಕಪ್ಪಗೌಡರು (ಬಿ.ಎ.ವಿವೇಕ ರೈ), ಕನ್ನಡಕ್ಕೂ ಬೇಕು ಕಾಪಿ ಎಡಿಟಿಂಗ್ (ಎಸ್.ವಿ ಉದಯರವಿ ಶಾಸ್ತ್ರೀ), ಪುಸ್ತಕ ಪರಿಚಯ; ಡಾ. ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ (ಮಂಜುಳ ಗೋನಾಳ), ವಸಾಹತೋತ್ತರ ಕಾಲದ ಪ್ರಶ್ನೆಗಳು ಮತ್ತು ಶಿವಪ್ರಕಾಶಕರ ಕಾವ್ಯ (ಡಾ. ಕೇಶವ ಶರ್‍ಮ.ಕೆ), ಡಾ.ಡಿ.ಆರ್. ನಾಗರಾಜ್ ಅವರ ‘ಅನನ್ಯ ಪ್ರತಿಭೆಯ ಪರಿ’(ಡಾ. ಆರ್.ಚಲಪತಿ), ಡಾ. ತೇಜಸ್ವಿ ಕಟ್ಟೀಮನಿ ಅವರ ‘ಜಂಗ್ಲಿ ಕುಲಪಯತಿಯ ಜಂಗಿಕಥೆ’, ಡಾ.ನಿತ್ಯಾನಂದರ ಸಂಶೋಧನ ‘ಮಾರ್ಗಾನ್ವೇಷಣೆ ’(ಡಾ.ಮಾಧವ ಕುಪ್ಪಳಿ), ಸಿಯಾಚಿನ್ ಗೆ ದೂರದಾರಿ ( ಕವಿತಾ ಕೂಡ್ಲು), ಡಾ. ಪಾದೇಕಲ್ಲು ವಿಷ್ಣು ಭಟ್ಟ ಅವರ ಹಿರಿಯರಿವರು (ಸವಿತಾ ಶಾಂತಪ್ರಿಯ), ತುಳುನಾಡಿನಲ್ಲಿ ಬಾಶೆಲ್ ಮಿಷನ್ ಮತ್ತಿತರ ಲೇಖನಗಳು (ಪ್ರೊ. ನಂದಕಿಶೋರ), ಭಾರತ ಸಂವಿಧಾನ ( ಡಾ. ಪುರುಷೋತ್ತಮ ಕೆ.ವಿ), ಗಜಾನನ ಶರ್ಮ ಅವರ ಚೈನ್ನಭೈರಾದೇವಿ (ಡಾ. ಬಿ. ಜನಾರ್ಧನ ಭಟ್), ಟಿ.ಪಿ ಅಶೋಕರ ‘ಮೊಕಾಶಿ ಕಥನ’ (ಡಾ.ಎನ್.ಕೆ. ರಾಜಲಕ್ಷ್ಮೀ ), ಹರಿದಾಸರ ಸಮಾಜಮುಖಿ ಕೀರ್ತನೆಗಳು (ಕೃಷ್ಣ ಕೊಲ್ಹಾರ ಕುಲಕರ್ಣಿ), ಡಾ.ನಾ.ಮೊಗಸಾಲೆ ಅವರ ‘ಬ್ರಹ್ಮಯಾನ’ (ವಿದ್ಯಾರಶ್ಮಿ ಪೆಲತ್ತಡ್ಕ), ದಾರಾ ಶುಕೋಹ್’ನ ಕನಸುಗಳು (ರಮೇಶಭಟ್ಟ, ಬೆಳುಗೋಡ), ಎಸ್. ಆರ್. ವಿಜಯಶಂಕರ ಅವರ ‘ಒಳದನಿ’ಗೆ ಕಿವಿಯಾಗಿ (ಕೃಷ್ಣಪ್ರಕಾಶ ಉಳಿತ್ತಾಯ), ಎಚ್.ಎಸ್. ವೆಂಕಟೇಶಮೂರ್ತಿಯವರ ‘ಬುದ್ಧಚರಣ’ದ ಗತಿಯಲ್ಲಿ ಕಾವ್ಯ ಪರಂಪರೆಯ ಹೊನಲು (ಅಶೋಕ ಹಾಸ್ಯಗಾರ), ಡಾ.ಎಂ.ಎಂ.ಕಲಬುರ್ಗಿ ಅವರ ಸಮಗ್ರ ಸಾಹಿತ್ಯ ಸಂಪುಟಗಳು : ಜ್ಞಾನಲೋಕದ ಅನಾವರಣ (ಕೆ.ರವೀಂದ್ರನಾಥ), ಜಯಪ್ರಕಾಶ್ ಮಾವಿನಕುಳಿಯವರ ‘ಅಂತರ’ (ಕಾದಂಬರಿ, ಕಂನಡಿಗಾ ನಾರಾಯಣ, ‘ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬದುಕು-ಬರಹ’ (ಎಚ್.ದಂಡಪ್ಪ), ನಿರಾಕಾರವಾದದ್ದರ ಹುಡುಕಾಟ: ಜೋಗಿಯವರ ‘ಪುಚ್ಚೆ’ (ಸುಬ್ರಾಯ ಚೊಕ್ಕಾಡಿ), ಸಾರಸ್ವತ ಚಿಂತನೆಗೆ ಭಿನ್ನಾಭಿಪ್ರಾಯಗಳು ಮುಳ್ಳಾಗಬಾರದು ಮಲ್ಲೇಪುರಂ ಜಿ.ವೆಂಕಟೇಶ್(ಕೆ.ಬಿ ಕಿರಣ್ ಸಿಂಗ್) ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದವರ ವಿವರ, ಪುಸ್ತಕ ಸೊಗಸು ಹಾಗೂ ಮುದ್ರಣ ಸೊಗಸು ಬಹುಮಾನ ಸ್ವೀಕರಿಸಿದವರ ವಿವರ, 2020ನೇ ಸಾಲಿನ ಯುವಬರಹಗಾರರ ಚೊಚ್ಚಲ ಕೃತಿಗಳ ಪ್ರೋತ್ಸಾಹ ಧನಕ್ಕೆ ಆಯ್ಕೆಯಾದವರ ವಿವರಗಳು ಒಳಗೊಂಡಿದೆ. 

About the Author

ನಂದೀಶ್ ಹಂಚೆ
(10 February 1978)

ಲೇಖಕ ನಂದೀಶ ಹಂಚೆ ಅವರು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಎಂ.ಎ ಪೂರ್ಣಗೊಳಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ’ ವಿಷಯದಡಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದರು.  ಕೃತಿಗಳು: ಕೆಂಡದೊಳಗಿನ ಬೇರು(ವಿಮರ್ಶೆ), ದುಡಿ (ವಿಮರ್ಶೆ), ಅಲ್ಲಮ ಮತ್ತು ಅರಾಜಕತೆ (ವಿಮರ್ಶೆ), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ(ಮಹಾಪ್ರಬಂಧ), ಬಸವಣ್ಣ ಮತ್ತು(ಸಂಪಾದಿತ), ಎಚ್.ಎಂ. ಚನ್ನಯ್ಯ ಸಮಗ್ರ ಸಾಹಿತ್ಯ, ಬಸವಪ್ಪಶಾಸ್ತ್ರಿಗಳ ಸಮಗ್ರ ನಾಟಕ ಸಾಹಿತ್ಯ(ಸಂಪಾದಿತ), ಕುವೆಂಪು ಕಥೆಗಳ ಸಮೀಕ್ಷೆ ...

READ MORE

Related Books