ಬಸವಣ್ಣ ಮತ್ತು ...

Author : ನಂದೀಶ್ ಹಂಚೆ

Pages 164

₹ 100.00




Year of Publication: 2012
Published by: ಸಂವಹನ
Address: ನಂ.12/1ಎ, ಸಂಜೆ ಬಜಾರ್ ಹಿಂದೆ, ಶಿವರಾಂ ಪೇಟೆ, ಮೈಸೂರು-1

Synopsys

ಡಾ. ಎಂ. ಎಂ. ಕಲಬುರ್ಗಿಯವರ ಪ್ರಂಬಧಗಳ ಸಂಕಲನ ‘ಬಸವಣ್ಣ ಮತ್ತು’ ಈ ಕೃತಿಯನ್ನು ನಂದೀಶ ಹಂಚೆ ಸಂಪಾದಿಸಿದ್ದಾರೆ. ಡಾ. ಎಂ.ಎಂ. ಕಲ್ಬುರ್ಗಿಯವರು ಕನ್ನಡದ ಸೋಪಜ್ಞ ಪ್ರತಿಕ್ರಿಯಾತ್ಮಕ ಸಂಶೋಧಕರು. ಅವರ ಮಾರ್ಗ ಸಂಶೋಧನಾ ಕೃತಿಗಳು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲು. ಸಾಹಿತ್ಯ ಚರಿತ್ರೆಯ ಆರಂಭ ಕಾಲದಲ್ಲಿ ನಮ್ಮ ಅನೇಕ ಪ್ರಸಿದ್ಧ ಕವಿಗಳೂ ಸೇರಿದಂತೆ ಹಲವರ ಬಗ್ಗೆ ಕೇವಲ ಊಹಾ ಸಿದ್ಧಾಂತವನ್ನು ಮೂಲವಾಗಿಸಿ ಚರಿತ್ರೆಯ ಕಟ್ಟುವಿಕೆಗೊಂದು ಹೊಸ ಭಾಷ್ಯ ಬರೆದವರು ಕಲ್ಬುರ್ಗಿಯವರು. ಅವರ ಮಹತ್ವದ ಪ್ರಬಂಧಗಳನ್ನು ಇಲ್ಲಿ ಸಂಪಾದಿಸಲಾಗಿದೆ. 

About the Author

ನಂದೀಶ್ ಹಂಚೆ
(10 February 1978)

ಲೇಖಕ ನಂದೀಶ ಹಂಚೆ ಅವರು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2004ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಲ್ಲಿ ಎಂ.ಎ ಪೂರ್ಣಗೊಳಿಸಿ, ಹಂಪಿಯ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಎಂ.ಫಿಲ್ ಪದವಿ ಪಡೆದಿದ್ದಾರೆ. ಮೈಸೂರು ವಿಶ್ವವಿದ್ಯಾಲಯದಲ್ಲಿ ‘ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ ’ ವಿಷಯದಡಿ ಮಹಾಪ್ರಬಂಧ ರಚಿಸಿ ಪಿಎಚ್.ಡಿ ಪಡೆದರು.  ಕೃತಿಗಳು: ಕೆಂಡದೊಳಗಿನ ಬೇರು(ವಿಮರ್ಶೆ), ದುಡಿ (ವಿಮರ್ಶೆ), ಅಲ್ಲಮ ಮತ್ತು ಅರಾಜಕತೆ (ವಿಮರ್ಶೆ), ಶಿವರಾಮ ಕಾರಂತರ ಕಾದಂಬರಿಗಳಲ್ಲಿ ಸಾಮಾಜಿಕ ಪ್ರಜ್ಞೆ(ಮಹಾಪ್ರಬಂಧ), ಬಸವಣ್ಣ ಮತ್ತು(ಸಂಪಾದಿತ), ಎಚ್.ಎಂ. ಚನ್ನಯ್ಯ ಸಮಗ್ರ ಸಾಹಿತ್ಯ, ಬಸವಪ್ಪಶಾಸ್ತ್ರಿಗಳ ಸಮಗ್ರ ನಾಟಕ ಸಾಹಿತ್ಯ(ಸಂಪಾದಿತ), ಕುವೆಂಪು ಕಥೆಗಳ ಸಮೀಕ್ಷೆ ...

READ MORE

Related Books