About the Author

ನಾರಾಯುಣೀ ದಾಮೋದರ ಅವರು ಮೂಲತಃ ಐರೋಡಿಯವರು. ಬಾಲ್ಯದ ಬಹುತೇಕ ಭಾಗವನ್ನು ಕುಂದಾಪುರದಲ್ಲಿ ಕಳೆದರು. ಮಂಗಳೂರು ಆಕಾಶವಾಣಿಯಲ್ಲಿ ಉದ್ಘೋಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ನಿರ್ದೇಶನದಲ್ಲಿ ಜರುಗಿದ ಬಾಲವೃಂದ, ಇವರು ನೀವು ಬಲ್ಲಿರಾ? , ಹಚ್ಚುವ ಜ್ತಾನದ ಹಣತೆಯ ಕಾರ್ಯಕ್ರಮಗಳು ಬಾನುಲಿ ಕೇಳುಗರ ಮನಸೂರೆಗೊಂಡಿದ್ದವು. ಆಕಾಶವಾಣಿ ಕಲಾವಿದರಾಗಿ ಹರಿಕಥೆ, ಭಕ್ತಿಗೀತೆ, ಭಾವಗೀತೆಗಳನ್ನು ಹಾಡಿದ್ದಾರೆ. ಹಲವು ನಾಟಕಗಳನ್ನು ನಿರ್ದೇಶಿಸಿ ಅಭಿನಯಿಸಿದ್ದಾರೆ.

ಪುರಾಣ -ಉಪನಿಷತ್ತುಗಳಿಂದ ಆಯ್ದ ಕಥೆಗಳು ಆಕಾಶವಾಣಿಯಲ್ಲಿ ಪ್ರಸಾರಗೊಳಿಸಿದ್ದೂ ಸೇರಿದಂತೆ ಮತ್ತಿತರೆ ಕಥೆಗಳನ್ನು ಸೇರಿಸಿ   ‘ಒಂದಾನೊಂದು ಕಾಲದಲ್ಲಿ’ ಪುಸ್ತಕ ಪ್ರಕಟಿಸಿದರು. ನಂತರ ಪ್ರಕಟವಾದ ‘ಬೆಳಕು ನೀಡುವ ಕಥೆಗಳು’ ಸಂಕಲನದ ‘ತಾಳ್ಮೆಗೆ ಒಲಿದ ಅದೃಷ್ಟ’ ಕಥೆಯು ದೆಹಲಿಯ ಇಂಡಿಯನ್ ಸರ್ಟಿಫಿಕೆಟ್ ಆಫ್ ಸೆಕಂಡರಿ ಎಜ್ಯುಕೇಷನ್  10ನೇ ತರಗತಿಯ ಆಂಗ್ಲ ಮಾಧ್ಹಮ ವಿದ್ಯಾರ್ಥಿಗಳಿಗಾಗಿ ಸಿದ್ಧ ಪಡಿಸಿದ್ದ’ಸಾಹಿತ್ಯ ಸಂಗಮ’ ಪಠ್ಯದಲ್ಲಿ ಸೇರ್ಪಡೆಯಾಗಿತ್ತು. ಆಂಗ್ಲ ಪುಸ್ತಕ ‘ದಿ ಮನಿ ಲೆಂಡರ್’ ನ್ನು ‘ಬಡ್ಡಿ ಸಾವುಕಾರ ಎಂದು ಅನುವಾದಿಸಿದ್ದು, ಎನ್. ಬಿ.ಟಿ. ಪ್ರಕಟಿಸಿದೆ.  

ಇವರು ಕಾಲಕಾಲಕ್ಕೆ ಬರೆದ ವಿಷಯ ವೈವಿಧ್ಯೆತೆಯ ಹಲವಾರು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ನಾರಾಯಣೀ ದಾಮೋದರ್