About the Author

ಪದ್ಮಿನಿ ನಾಗರಾಜು ಅವರು ಮೈಸೂರು ಜಿಲ್ಲೆಯ ಸಾಲಿಗ್ರಾಮದವರು. ಗಂಗಾವತಿ, ಚಿಕ್ಕಮಗಳೂರಿನಲ್ಲಿ ವಿದ್ಯಾಭ್ಯಾಸ. ಸ್ನಾತಕೋತ್ತರ ಹಾಗೂ ಪಿಎಚ್‌.ಡಿ ಪದವಿ ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಲ್ಲಿ. ಪ್ರಸ್ತುತ 'ರಾಣಿ ಸರಳಾದೇವಿ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಹಾಗೂ ‘ಕೇಂದ್ರ ಸಾಹಿತ್ಯ ಅಕಾಡೆಮಿ'ಯ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಅವರ ಅನೇಕ ಲೇಖನ, ಕಥೆ, ಕವಿತೆಗಳು ಕನ್ನಡ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಂಕಣಕಾರ್ತಿಯಾಗಿಯು ಗುರುತಿಸಿಕೊಂಡಿದ್ದಾರೆ.

'ಗೆಳತಿಯಾಗುವುದೆಂದರೆ' (ಕವನ ಸಂಕಲನ), 'ಸಮಾಧಿ ಮೇಲಿನ ಹೂ' (ಕಥಾ ಸಂಕಲನ), 'ಅವ್ವ' (ಲಂಕೇಶರ ಆತ್ಮಚರಿತ್ರೆಯನ್ನು ಆಧರಿಸಿದ ನಾಟಕ), 'ಅರಿವಿನ ಮಾರ್ಗದ ಸೋಪಾನಗಳು-ಅನುಪ್ರೇಕ್ಷೆಗಳು' (ಸಂಶೋಧನೆ), ಕೃಷ್ಣಮೂರ್ತಿ ಕವತ್ತಾರ (ವ್ಯಕ್ತಿಚಿತ್ರ), ಸಮತ್ವ (ಪ್ರಬಂಧ ಸಂಕಲನ) 'ಅವನಿ', 'ಶ್ರೇಯೋಭದ್ರ', 'ಧವಳ' (ಸಂಪಾದನೆ), 'ಕಸಾಯಪಾಹುಡ' (ಹಿಂದಿಯಿಂದ ಕನ್ನಡಕ್ಕೆ ಅನುವಾದ) - ಅವರ ಪ್ರಮುಖ ಕೃತಿಗಳು.

ಇವರ 'ಸಮಾಧಿ ಮೇಲಿನ ಹೂ' ಕಥೆಗೆ ಕರ್ನಾಟಕ ಲೇಖಕಿಯರ ಸಂಘದಿಂದ 'ಉಮಾದೇವಿ ದತ್ತಿನಿಧಿ ಪ್ರಶಸ್ತಿ', ಅದೇ ಹೆಸರಿನ ಕಥಾಸಂಕಲನಕ್ಕೆ 'ಇನ್‌ಫೋಸಿಸ್ ಸುಧಾಮೂರ್ತಿ ದತ್ತಿನಿಧಿ ಪ್ರಶಸ್ತಿ' ದೊರಕಿದೆ. 'ರಂಗಶಿಲ್ಪಿ', 'ಕಲಾಭಾರತಿ', 'ದಕ್ಷಕ್ ಮಹಿಳೆ', 'ಬ್ರಾಹ್ಮಿಶ್ರೀ' ಪ್ರಶಸ್ತಿಗಳಿಂದಲೂ ಪುರಸತರಾಗಿದ್ದಾರೆ. 'ಅವ್ವ' ನಾಟಕಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ, ಕ.ಸಾ.ಪ ಕೊಡಮಾಡುವ 2020ನೇ ಸಾಲಿನ ಶ್ರೀನಿವಾಸ ಸ್ಮರಣಾರ್ಥ ಪಿ.ಕೆ. ನಾರಾಯಣ ದತ್ತಿ ಪ್ರಶಸ್ತಿ ಸಂದಿದೆ.

ಪದ್ಮಿನಿ ನಾಗರಾಜ್ ಎಸ್.ಪಿ.

(06 Apr 1966)

Stories/Poems

BY THE AUTHOR